ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದು ಹೃದಯ ಸ್ಪರ್ಶಿ ವೀಡಿಯೊ ಚರ್ಚೆಯಲ್ಲಿದೆ. ತಮಿಳು ಹಾಡು ‘ದೋಸೆ ಇಡ್ಲಿ ಸಾಂಬಾರ್ ಚಟ್ನಿ ಚಟ್ನಿ’ಗೆ ತಂದೆ ಮತ್ತು ಮಗಳು ಮಾಡಿದ ಡಾನ್ಸ್ ನೆಟ್ಟಿಗರ ಗಮನ ಸೆಳೆದಿದೆ. ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡಿರುವ ಅವರ ಡಾನ್ಸ್ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
ತಂದೆ ಬಿಳಿ ಶರ್ಟ್-ಪಂಚೆ ಧರಿಸಿ, ಭುಜದ ಮೇಲೆ ಹಸಿರು-ಹಳದಿ ಶಾಲು ಹಾಕಿಕೊಂಡರೆ, ಮಗಳು ಬಿಳಿ-ಚಿನ್ನದ ಬಣ್ಣದ ಅಂಚು ಇರುವ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದಾಳೆ. . ದಕ್ಷಿಣ ಭಾರತದ ಜನಪ್ರಿಯ ಖಾದ್ಯಗಳನ್ನು ಹಾಸ್ಯಮಯವಾಗಿ ಪ್ರಸ್ತುತಪಡಿಸುವ ಈ ಹಾಡಿಗೆ ಇವರಿಬ್ಬರೂ ನೀಡಿದ ಸಿಂಕ್ರೊನೈಜ್ಡ್ ನೃತ್ಯ ವೀಕ್ಷಕರನ್ನು ಮಂತ್ರಮುಗ್ಧರಾಗಿಸಿದೆ.
ಈ ವೀಡಿಯೊ ಈಗಾಗಲೇ 1.4 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಗೊಳಗಾಗಿದ್ದು, 7.2 ಲಕ್ಷ ಲೈಕ್ಗಳು ಮತ್ತು ಸಾವಿರಾರು ಕಾಮೆಂಟ್ಗಳನ್ನು ಪಡೆದಿದೆ. ಕೆಲವು ಬಳಕೆದಾರರು ತಂದೆಯನ್ನು ಹಾಡಿನ ಮೂಲ ಗಾಯಕನೆಂದು ಭಾವಿಸಿ, “ಮಾಮಾ ನೀವೇ ಈ ಹಾಡನ್ನು ಹಾಡಿದ್ದೀರಾ?” ಎಂದು ಕೇಳಿದ್ದರೆ, ಮತ್ತೊಬ್ಬರು “ತಂದೆ-ಮಗಳ ಜೋಡಿ ಅದ್ಭುತ” ಎಂದು ಪ್ರಶಂಸಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ತಮಿಳು ಹಾಡು ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಸೆಲಿಬ್ರಿಟಿಗಳು ಮತ್ತು ಸಾಮಾನ್ಯರು ಸಹ ಈ ಹಾಡಿಗೆ ತಮ್ಮದೇ ಆದ ರೀಲ್ಸ್ ರಚಿಸುತ್ತಿದ್ದಾರೆ. ಈ ನಡುವೆ ತಂದೆ-ಮಗಳ ಜೋಡಿಯ ನೃತ್ಯವು ವಿಶೇಷ ಸ್ಥಾನ ಪಡೆದುಕೊಂಡಿದೆ.
“ಇದು ನಿಜವಾದ ಕುಟುಂಬದ ಸಂತೋಷ ” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಭಾರತದ ಸಂಸ್ಕೃತಿಯ ಸೊಬಗು ಮತ್ತು ಆಹಾರದ ಮೇಲಿನ ಪ್ರೀತಿಯನ್ನು ಚಿತ್ರಿಸುವ ಈ ವೀಡಿಯೊ ಇನ್ನೂ ಹೆಚ್ಚು ಜನರನ್ನು ಮುಟ್ಟುವ ಸಾಧ್ಯತೆಗಳಿವೆ.