ಬೆಳಗಾವಿ: ರೈತರಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೆ ಇದೆ. ಗಾಳಿ ಮಳೆಗೆ ಹೊಡೆತವಾದ ಬೆಳೆಗಳು ಈಗ ಹಂದಿಗಳಿಂದ ಹಾನಿಗೆ ಸಿಲುಕಿವೆ.
ಬೆಳಗಾವಿಯ ಹಾರೂಗೇರಿ ಗ್ರಾಮದಲ್ಲಿ ರೈತರ ಸಂಕಟ ಯಾರಿಗೂ ಹೇಳದಂತಾಗಿದೆ. ಇತ್ತೀಚೆಗೆ ಗಾಳಿ ಮಳೆಯಿಂದ ಆದ ಬೆಳೆ ಹಾನಿಯಿಂದ ಇನ್ನೂ ಹೊರಬರಲಾರದೇ ಇರುವ ರೈತರು ಇದೀಗ ಹಂದಿಗಳ ಕಾಟದಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ತಾವು ಕಷ್ಟಪಟ್ಟು ಬೆಳೆದ ಬೆಳೆಗೆ ಹಂದಿಗಳಿಂದ ಹಾನಿ ಆಗುತ್ತಿರುವುದನ್ನು ನೋಡಿ ರೈತರು ಮನನೊಂದು ಹೋಗಿದ್ದಾರೆ. ಒಂದು ವಾರದ ಮೇಲೆ ಹಂದಿಗಳ ಈ ಕಾಟ ಮುಂದುವರೆದರೂ, ಇನ್ನೂ ಪುರಸಭೆಯವರು ಸ್ಪಂದಿಸದೇ ನಿರ್ಲಕ್ಷ್ಯ ತೋರುತ್ತಿರುವುದರಿಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.