ಬೆಂಗಳೂರು : ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಕಾರು ಗುದ್ದಿಸಿ ದಂಪತಿ ಕೊಲೆಗೈದಿದ್ದಾರೆ. ಈ ಘಟನೆ ನಗರದ ಪುಟ್ಟೇನಹಳ್ಳಿಯ ಶ್ರೀರಾಮಲೇಔಟ್‌ನಲ್ಲಿ ನಡೆದಿದೆ.
ದರ್ಶನ್ ಮತ್ತು ವರುಣ್ ಎಂಬ ಇಬ್ಬರು ಸವಾರರು ಬೈಕ್‌ನಲ್ಲಿ ಚಲಿಸುತ್ತಿದ್ದರು, ಅದೇ ರಸ್ತೆಯಲ್ಲಿ ಮನೋಜ್ ದಂಪತಿ ಕಾರಿನಲ್ಲಿ ಹೋಗುತ್ತಿರುವಾಗ ಬೈಕ್ ಕಾರಿನ ಮಿರರ್ ಗೆ ಟಚ್ ಆಗಿದೆ. ಈ ದ್ವೇಶಕ್ಕೆ ಬೈಕ್‌ನ್ನು ಸುಮಾರು 2 ಕಿ.ಮೀ. ವರೆಗೂ ಹಿಂಬಾಲಿಸಿಕೊಂಡು ಹೋಗಿ ಡಿಕ್ಕಿ ಹೊಡೆದು ಅಪಘಾತವೆಸಗಿದ್ದಾರೆ.
ಈ ದುರಂತದಲ್ಲಿ ದರ್ಶನ್ ಮೃತಪಟ್ಟಿದ್ದು, ವರುಣ್ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಜೆಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಂತರ ಅಪಘಾತದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ಉದ್ದೇಶಪೂರ್ವಕವಾಗಿ ಕಾರು ಗುದ್ದಿಸಿರುವುದು ಪತ್ತೆಯಾಗಿದೆ. ಅಪಘಾತದ ಬಳಿಕ ದಂಪತಿ ಕಾರು ಸ್ವಲ್ಪ ಮುಂದೆ ನಿಲ್ಲಿಸಿ ಕಾರಿನ ಬಿಡಿಭಾಗಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಇದೀಗ ಮನೋಜ್, ಆರತಿ ದಂಪತಿ ಪೋಲಿಸರ ವಶದಲ್ಲಿದ್ದಾರೆ.
ಇದನ್ನೂ ಓದಿ : ICC ODI Rankings | ವಿಶ್ವ ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ – ನಿವೃತ್ತಿ ವದಂತಿ ನಡುವೆಯೂ ನಂ.1 ಪಟ್ಟಕ್ಕೇರಿದ ಹಿಟ್‌ಮ್ಯಾನ್!



















