ತುಮಕೂರು : ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯ ಡಿ ದರ್ಜೆ ನೌಕರ ಶಿವಕುಮಾರ್ ಎಂಬಾತ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿ ಮಾಡಿಕೊಂಡಿರುವುದು ಪತ್ತೆಯಾಗಿದ್ದು, ಆತನನ್ನು ತುಮಕೂರು ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮೂಲಗಳ ಪ್ರಕಾರ, ಲಂಚದ ಆಸೆಗಾಗಿ ಶಿವಕುಮಾರ್ ಉನ್ನತ ಅಧಿಕಾರಿಗಳ ಸಹಿ ಫೋರ್ಜರಿ ಮಾಡಿ, ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿ ಮಾಡಿದ್ದಾನೆ. ಈ ಬಗ್ಗೆ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಮಮತ ದೂರು ಸಲ್ಲಿಸಿದ್ದು, ಇದರ ಆಧಾರವಾಗಿ ತುಮಕೂರು ಜಿಲ್ಲಾಧಿಕಾರಿಯಿಂದ ಅಮಾನತು ಆದೇಶ ಹೊರಬಿದ್ದಿದೆ.
ಘಟನಾ ಸಂಬಂಧಿಸಿ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಹಾಗೂ ಭಾರತೀಯ ದಂಡ ಸಂಹಿತೆ ಅಡಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಸದ್ಯ ಪೊಲೀಸರಿಂದ ತನಿಖೆ ಮುಂದುವರಿಸುತ್ತಿದೆ. ಈ ಹಿಂದೆ ಲಂಚಮುಕ್ತ ವೇದಿಕೆ ಈ ನೌಕರನ ವಿರುದ್ಧ ಎಚ್ಚರಿಕೆ ನೀಡಿದ್ದರೂ, ತನ್ನ ಕಳ್ಳಾಟ ಬಿಡದ ಕಾರಣ ಅಮಾನತು ಮಾಡಲಾಗಿದೆ.
ಇದನ್ನೂ ಓದಿ : ರೈಲು ಪ್ರಯಾಣಿಕರೇ ಗಮನಿಸಿ | ನಿಮ್ಮ ಟಿಕೆಟ್ ಕ್ಯಾನ್ಸಲ್ ಆಗಬಾರದು ಎಂದರೆ ಹೀಗೆ ಮಾಡಿ



















