ಬೆಂಗಳೂರು : ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ. ಆದಾಯ ತೆರಿಗೆಯಲ್ಲಿ ಹಲವು ನಿಯಮಗಳು ಬದಲಾಗಲಿವೆ. ಇದರ ಮಧ್ಯೆಯೇ, ದೇಶದಲ್ಲಿ ಯಾವುದೇ ನಾಗರಿಕರು ಮನೆಯಲ್ಲಿ ನಗದು ಅಥವಾ ಕ್ಯಾಶ್ ಇಟ್ಟುಕೊಂಡರೆ ಶೇ.84ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ, ಸಾರ್ವಜನಿಕರು ಶೇ.84ರ ತೆರಿಗೆ ನಿಯಮಗಳ ಕುರಿತು ತಿಳಿಯುವುದು ಅಗತ್ಯವಾಗಿದೆ.
ಖಂಡಿತವಾಗಿಯೂ ಇಲ್ಲ. ಮನೆಯಲ್ಲಿ ನಗದು ಇಟ್ಟುಕೊಂಡರೆ, ಬ್ಯಾಂಕಿನಿಂದ ಡ್ರಾ ಮಾಡಿ ಲಕ್ಷಾಂತರ ರೂಪಾಯಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದರೆ ಶೇ.84ರಷ್ಟು ತೆರಿಗೆ ವಿಧಿಸುವುದಿಲ್ಲ. ಆದರೆ, ನೀವು ಮನೆಯಲ್ಲಿ ಇಟ್ಟುಕೊಂಡ ಹಣಕ್ಕೆ ದಾಖಲೆ, ವಹಿವಾಟಿನ ವಿವರ, ಆದಾಯದ ಮೂಲದ ಕುರಿತು ಸರಿಯಾದ ದಾಖಲೆ ನೀಡದಿದ್ದರೆ, ನೀವು ಆಗ ಶೇ.84ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.
ಹೌದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 68, 69 ಸೇರಿ ಹಲವು ಸೆಕ್ಷನ್‌ಗಳ ಅನ್ವಯ, ದಾಖಲೆ ಇಲ್ಲದ ಹಣಕ್ಕೆ ಶೇ.84ರಷ್ಟು ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಯಾವುದೇ ದಾಖಲೆ ಇಲ್ಲದೆ ಸಂಗ್ರಹಿಸಿದ ಹಣಕ್ಕೆ ಶೇ.60ರಷ್ಟು ತೆರಿಗೆ ವಿಧಿಸಲಾಗುತ್ತದೆ. ಸರ್ ಚಾರ್ಜ್ ಹಾಗೂ ಸೆಸ್ ಸೇರಿ ಒಟ್ಟು ಶೇ.84ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ಉದಾಹರಣೆಗೆ… ನಿಮ್ಮ ಮನೆಯ ಮೇಲೆ ಐಟಿ ದಾಳಿಯಾಗಿದೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಮನೆಯಲ್ಲಿ ಯಾವುದೇ ದಾಖಲೆ ಇಲ್ಲದ 10 ಲಕ್ಷ ರೂಪಾಯಿ ದೊರೆತರೆ, ಅದಕ್ಕೆ 8.4 ಲಕ್ಷ ರೂಪಾಯಿ ತೆರಿಗೆ ವಿಧಿಸಲಾಗುತ್ತದೆ. ಅಲ್ಲಿಗೆ ನಿಮ್ಮ ಬಳಿ 1.6 ಲಕ್ಷ ರೂಪಾಯಿ ಮಾತ್ರ ಉಳಿಯುತ್ತದೆ. ಆದಾಗ್ಯೂ, ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ಒಂದು ವರ್ಷದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಹಣ ಕ್ರೆಡಿಟ್ ಆದರೆ, ಐಟಿ ಅಧಿಕಾರಿಗಳು ನಿಮ್ಮ ಖಾತೆ ಮೇಲೆ ಕಣ್ಣಿಡುತ್ತಾರೆ.
ಇದನ್ನೂ ಓದಿ : ಐಪಿಎಲ್‌ನಿಂದ ಹೊರಬಿದ್ದ ಬಾಂಗ್ಲಾ ಹುಲಿ ಈಗ ಪಾಕಿಸ್ತಾನಕ್ಕೆ.. ಮುಸ್ತಫಿಜುರ್ ಸಂಭಾವನೆ ಶೇ.77ರಷ್ಟು ಕಡಿತ!



















