ಬೆಂಗಳೂರು: ಅಬಕಾರಿ ಇಲಾಖೆಯ ಆದಾಯ ಎರಡು ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಸಂಗ್ರಹವಾಗಿದೆ. ಜೊತೆಗೆ ಪ್ರೀಮಿಯಂ ಬ್ರ‍್ಯಾಂಡ್ ಮದ್ಯದ ದರ ಇಳಿಕೆ ಮಾಡುವ ಚಿಂತನೆ ಇದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತಿಮ್ಮಾಪುರ್, ಅಬಕಾರಿ ಇಲಾಖೆಯಿಂದ ಆದಾಯದ ನಿರೀಕ್ಷೆ ಇರುತ್ತದೆ. ಎರಡು ತ್ರೈಮಾಸಿಕದಲ್ಲಿ ನಮ್ಮ ಆದಾಯ ನಿರೀಕ್ಷೆಗೂ ಮೀರಿ ಸಂಗ್ರಹವಾಗಿದೆ. 2 ತ್ರೈಮಾಸಿಕದಲ್ಲಿ ನಮ್ಮ ನಿರೀಕ್ಷೆ 16,290 ಕೋಟಿ ರೂ. ಇತ್ತು. ಆದರೆ ಈಗ 16,358.76 ಕೋಟಿ ರೂ. ಸಂಗ್ರಹವಾಗಿದ್ದು, ನಿರೀಕ್ಷೆಗೂ ಮೀರಿ 142% ಜಾಸ್ತಿ ಸಂಗ್ರಹ ಆಗಿದೆ ಎಂದಿದ್ದಾರೆ.
ನಮ್ಮ ಇಲಾಖೆಯಲ್ಲಿ ಹೊಸ ಬದಲಾವಣೆಗಳನ್ನು ತರಲಾಗಿದ್ದು, ಮೊದಲ ಬಾರಿಗೆ ಅಬಕಾರಿ ಹುದ್ದೆಗಳ ನೇಮಕವನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುತ್ತಿದೆ. ಲೈಸೆನ್ಸ್‌ನ್ನು ಪ್ರತಿ ವರ್ಷ ನವೀಕರಣ ಮಾಡಬೇಕಿತ್ತು. ಆದರೆ ಈಗ ಇದನ್ನು 5 ವರ್ಷಕ್ಕೆ ಮಾಡಿದ್ದೇವೆ. CL-7 ಪರ್ಮಿಷನ್‌ಗೆ ಕಾಲಾವಕಾಶ ಬೇಕಿತ್ತು. ಆದರೆ ಈಗ ಇದರಲ್ಲಿ ಕೆಲವು ಬದಲಾವಣೆ ಮಾಡಿ ಆದಷ್ಟು ಬೇಗ ಅನುಮತಿ ಕೊಡುವ ಕೆಲಸ ಮಾಡ್ತಿದ್ದೇವೆ. ಡ್ರಗ್ಸ್, ಗಾಂಜಾ ಹಾವಳಿ ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತೀದ್ದಾರೆ ಎಂದು ತಿಳಿಸಿದ್ದಾರೆ.
CL2/CL9 ಅನುಮತಿ ಕೊಡಲು ನಿಯಮ ಬದಲಾವಣೆ ಮಾಡಿ, ಹರಾಜು ಮೂಲಕ ಕೊಡುವ ನಿರ್ಧಾರ ಮಾಡಲಾಗಿದ್ದು, 571 ಹರಾಜು ಹಾಕಿ ಅನುಮತಿ ಕೊಡುತ್ತೇವೆ. ಆದಷ್ಟೂ ಬೇಗ ಈ ಪ್ರತಿಕ್ರಿಯೆ ಮಾಡುತ್ತೇವೆ ಜನಸಂಖ್ಯೆ ಅನುಗುಣವಾಗಿ ಜಾಸ್ತಿ ಅನುಮತಿ ಕೊಡುವ ಕೆಲಸ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಸಂಘಗಳಿಗೆ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳಲ್ಲಿದ್ದು, ನಮಗೆ ಆದಾಯ ಕಡಿಮೆ ಆಗಬಾರದು. ಆನ್‌ಲೈನ್ ಅರ್ಜಿಗೂ ಕೂಡ ವ್ಯವಸ್ಥೆ ಮಾಡಿಕೊಳ್ಲಲಾಗಿದೆ. ನಕಲಿ ಮದ್ಯ ಮಾರಾಟ, ಗೋವಾ ಡ್ರಿಂಕ್ಸ್ ಮಾರಾಟ ಮಾಡುತ್ತಾರೆ. ಹೀಗಾಗಿ ಈ ಬಗ್ಗೆ ನಿಗಾ ಇಡಲಾಗಿದೆ. ನಮ್ಮ ಮದ್ಯ ಸ್ಲ್ಯಾಬ್ 5ರ ಮೇಲಿನ ಪ್ರೀಮಿಯಂ ಬ್ರ‍್ಯಾಂಡ್ ಮೇಲೆ ದರ ಜಾಸ್ತಿ ಇದೆ. ಹೊಸ ಎಂಎಸ್‌ಐಎಲ್ ಮಳಿಗೆ ಕೊಡುವುದಿಲ್ಲ. ಇರುವ ಮಳಿಗೆ ಹರಾಜು ಹಾಕಿ ಕೊಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರೀಮಿಯಂ ಬ್ರ‍್ಯಾಂಡ್‌ಗಳ ಮದ್ಯದ ದರ ಕಡಿಮೆ ಮಾಡುವ ಬಗ್ಗೆ ಚಿಂತನೆ ಇದೆ. ಸದ್ಯಕ್ಕೆ ಆಗುವುದಿಲ್ಲ. ಅಕ್ಕ ಪಕ್ಕದ ರಾಜ್ಯಗಳ ವಿವರ ನೋಡಿ, ಮುಂದಿನ ದಿನಗಳಲ್ಲಿ ನಾವು ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಅಬಕಾರಿ ಇಲಾಖೆಯಲ್ಲಿ ಯಾರು ತರದ ಬದಲಾವಣೆ ಮಾಡುತ್ತೇನೆ, ಇದು ತಿಮ್ಮಾಪುರ್ ಸ್ಟೈಲ್ ಎಂದಿದ್ದಾರೆ.