ಬೆಂಗಳೂರು: ನಾಳೆಯಿಂದ ರಾಜ್ಯ ಸರ್ಕಾರ ಜಾತಿಗಣತಿ ಮಾಡುತ್ತಿದ್ದು ಗಣತಿ ಹೆಸರಿನಲ್ಲಿ ಸರ್ಕಾರ ಹಿಂದೂ ಧರ್ಮವನ್ನು ಒಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷದ ಅಜೆಂಡಾದಲ್ಲೇ ಹಿಂದೂ ವಿರೋಧಿ ನೀತಿ ಇದ್ದು ಹೊಸದಾಗಿ 52 ಜಾತಿಗಳನ್ನು ಸೇರಿಸಿ ಗೊಂದಲ ಸೃಷ್ಟಿಸಿ ಎಲ್ಲದರ ಮುಂದೆಯೂ ಕ್ರಿಶ್ಚಿಯನ್ ಹೆಸರು ತಂದಿದ್ದಾರೆ. ಸಿದ್ದರಾಮಯ್ಯನವರಿಗೆ ಅಧಿಕಾರ ಹೋಗುವ ಆತಂಕದಿಂದ ಕ್ರಿಶ್ಚಿಯನ್ ಹೆಸರು ತಂದಿದ್ದಾರೆಂದು ಆರ್.ಅಶೋಕ್ ಕಿಡಿಕಾರಿದ್ರು. ಸೋನಿಯಾ ಗಾಂಧಿಯವರನ್ನು ಓಲೈಸಲು ಕ್ರಿಶ್ಚಿಯನ್ ಹೆಸರು ತಳುಕು ಹಾಕಿದ್ದಾರೆ.
ಇದು ಕಾಂಗ್ರೆಸ್ ಸರ್ಕಾರದ ಪ್ರಾಯೋಜಕತ್ವದ ಸಮೀಕ್ಷೆಯಾಗಿದ್ದು ಸಿಎಂ ಸಿದ್ದರಾಮಯ್ಯನವರೇ ಇದಕ್ಕೆ ರಾಯಭಾರಿಯಾಗಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಗಾಂಧಿ ಅವರ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ, ತಮ್ಮ ಅಧಿಕಾರ ಲಾಲಸೆಗೆ ಸನಾತನ ಹಿಂದೂ ಧರ್ಮ ಮಲಿನ ಮಾಡಲು ಹೊರಟಿದ್ದು ನೂರು ಸಿದ್ದರಾಮಯ್ಯ ಬಂದರೂ ಹಿಂದೂ ಧರ್ಮ ಅಪವಿತ್ರ ಮಾಡಲು ಆಗಲ್ಲ.
ಮಧುಸೂದನ್ ವಿರುದ್ಧ ಆರ್.ಅಶೋಕ್ ಕೆಂಡಾಮಂಡಲ
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಿಗೆ ಸ್ಪಷ್ಟತೆಯೇ ಇಲ್ಲ ಎಂದು ವಿಪಕ್ಷ ನಾಯಕ ಅಶೋಕ್ ಕಿಡಿಕಾರಿದ್ದಾರೆ. ಗೊಂದಲವಿದ್ದ ಜಾತಿಗಳನ್ನು ತೆಗೆದಿದ್ದೇವೆ ಅಂತಾರೆ, ಕೆಲವು ಜಾತಿಗಳನ್ನು ಉಳಿಸಿಕೊಂಡಿದ್ದಾರೆ. ರದ್ದಾದ ಯಾವುದೇ ಹೊಸ ಜಾತಿ ಹೆಸರು ಹೇಳಿದರೂ ಬರೆದುಕೊಳ್ಳೋದಾಗಿ ಹೇಳುತ್ತಿದ್ದಾರೆ. ನಾವು ಪಾಕಿಸ್ತಾನದವರು ಅಂತ ಹೇಳಿದರೆ ಅದನ್ನೂ ಅವರು ಬರೆದುಕೊಳ್ತಾರಾ ಎಂದು ಮಧುಸೂದನ್ ಅವರಿಗೆ ಆರ್.ಅಶೋಕ್ ಪ್ರಶ್ನಿಸಿದರು. ಪಾಕಿಸ್ತಾನ್ ಜಿಂದಾಬಾದ್ ಅಂತಾ ಹೇಳುತ್ತಾರೆ ಅದನ್ನೂ ಬರೆದುಕೊಳ್ತೀರಾ? ಏನು ಬೇಕಾದರೂ ಬರೆಯಬಹುದು ಅಂದ್ರೆ ದೇಶ ವಿರೋಧಿಗಳಿಗೆ ಅವಕಾಶ ಮಾಡಿಕೊಟ್ಟಂತೆ.
ಆಯೋಗದ ಅಧ್ಯಕ್ಷ ಸಂವಿಧಾನಕ್ಕೆ ಅಪಚಾರ ಆಗುವ ರೀತಿ ಹೇಳಿಕೆ ಕೊಟ್ಟಿದ್ದಾರೆ. ಇದು ರಾಜಕಾರಣದ ಓಲೈಕೆಗಾಗಿ ಮಾಡ್ತಿರುವ ಸಮೀಕ್ಷೆಯಾಗಿದ್ದು ಈ ಸಮೀಕ್ಷೆಯಿಂದ ಯಾವುದೇ ಜಾತಿಗೂ ನ್ಯಾಯ ಸಿಗಲ್ಲ. ಲಿಂಗಾಯತ ಧರ್ಮ ಒಡೆಯುವ ಸಂಚು ಮಾಡಿದ್ದ ತಂಡವೇ ಈಗ ಹಿಂದೂ ಧರ್ಮ ಒಡೆಯಲು ಹೊರಟಿದೆ. ಸೊನಿಯಾ ಗಾಂಧಿ ಮಾರ್ಗದರ್ಶನ ಮೇರೆಗೆ ಈ ಜಾತಿ ಗಣತಿ ನಡೆಯುತ್ತಿದೆ. ಈ ಸಮೀಕ್ಷೆಯಿಂದ ಹಿಂದೆ ಕ್ರಿಶ್ಚಿಯನ್ ಮಿಷನರಿಗಳ ಕೈವಾಡ ಎಂದು ಆರ್.ಅಶೋಕ್ ಆರೋಪ ಮಾಡಿದ್ರು. ಈ ಜಾತಿ ಸಮೀಕ್ಷೆ ಅಧಿಕೃತ ಅಲ್ಲ, ಈ ಸಮೀಕ್ಷೆ ಕೋರ್ಟ್‌ನಲ್ಲಿ ನಿಲ್ಲಲ್ಲ, ಇದು ಅಸಾಂವಿಧಾನಿಕ ಸಮೀಕ್ಷೆ ಎಂದು ಆರ್.ಅಶೋಕ್ ಕಿಡಿಕಾರಿದರು.



















