ಬೆಂಗಳೂರು: ಸುಪ್ರೀಂ ಕೋರ್ಟ್ ಸೂಚನೆಯಂತೆ ಬರುವ ಜೂ.30 ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸದ್ದಿಲ್ಲದೆ ಕಾರ್ಯಚರಣೆ ಆರಂಭಿಸಿದೆ. ಜಿಬಿಎ ಚುನಾವಣೆ ನಡೆಸಲು ಸಿದ್ಧತೆಯನ್ನು ನಡೆಸುತ್ತಿರುವ ಆಯೋಗವೂ ಈ ಸಂಬಂಧ ಜ.20 ರಂದು ಮಹತ್ವದ ಸಭೆ ಕರೆದಿದೆ.
ಜಿಬಿಎ ಚುನಾವಣೆ ಸಂಬಂಧ ಕರೆದಿರುವ ಈ ಸಭೆಯಲ್ಲಿ ಸರ್ಕಾರದ ಅಧಿಕಾರಿಗಳು ಮತ್ತು ಜಿಬಿಎ ಅಧಿಕಾರಿಗಳು ಭಾಗಿಯಾಗುತ್ತಿದ್ದಾರೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ರಾವ್, ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಪಾಲಿಕೆಗಳ ಆಯುಕ್ತರುಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಭೆಯಲ್ಲಿ ಐದು ನಗರ ಪಾಲಿಕೆಗಳ ಮತದರರ ಪಟ್ಟಿ ಪರಿಶೀಲನೆ ಮಾಡುವುದರ ಜೊತೆಗೆ ನಗರಪಾಲಿಕೆ ವಾರ್ಡ್ ಮೀಸಲಾತಿಯ ಆಕ್ಷಪಣೆಗಳ ಸಂಭಂದ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಚುನಾವಣಾ ಕಾರ್ಯಕ್ಕೆ ಬಿಎಲ್ ಓ ಗಳ ನೇಮಕಾತಿ, ಕ್ಷೇತ್ರವಾರು ವಾರ್ಡ್ ವಿಂಗಡಣೆಯದ ವಾರ್ಡ್ ಗಳ ಮತಗಟ್ಟೆಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಆಯೋಗದ ಮೂಲಗಳು ತಿಳಿಸಿವೆ.
ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ ಸಂಗ್ರಹ, ಶಾಲಾ ಕಾಲೇಜುಗಳ ಪರೀಕ್ಷೆ ವೇಳಾಪಟ್ಟಿ ಮಾಹಿತಿ ಪಡೆದು ನಂತರ ಜಿಬಿಎ ಚುನಾವಣೆಗೆ ದಿನಾಂಕ ನಿಗದಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಚುನಾವಣೆ ಸಂಬಂಧ ಸಿಬ್ಬಂದಿಗಳ ಸಂಖ್ಯೆ ಮತ್ತು ತರಭೇತಿ ನೀಡುವುದು, ಅವಶ್ಯವಿರುವ ಇವಿಎಂ ಮಿಷನ್‌ಗಳ ಮಾಹಿತಿ ಸಂಗ್ರಹ, ಭದ್ರತೆ ಮತ್ತು ಮತಪೆಟ್ಟಿಗೆಗಳ ಸ್ಟ್ರಾಂಗ್ ರೂಂಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಸಭೆಯಲ್ಲಿ ಜಿಬಿಎ ಚುನಾವಣೆಗಳನ್ನು ಇವಿಎಂ ಯಂತ್ರಗಳ ಬದಲು ಬ್ಯಾಲೆಟ್ ಪೇಪರ್‌ನಲ್ಲಿ ನಡೆಸುವ ಬಗ್ಗೆಯೂ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆ | ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಜಯ!



















