ಮೈಸೂರು: KSRTC ಬಸ್ ಹರಿದು ವೃದ್ದನೊರ್ವ ಸಾವನ್ನಪ್ಪಿದ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ.
ಪುರುಷೋತ್ತಮಯ್ಯ (71) ಮೃತ ವೃದ್ದ. ಸರ್ಕಾರಿ ಬಸ್ಸೊಂದು ವೃದ್ಧನ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ವೃದ್ಧನ ತಲೆಯ ಮೇಲೆ ಬಸ್ ಹರಿದು ಹೋದ ಪರಿಣಾಮ ವೃದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಹಾಲಿನ ಬೂತ್ ನಿಂದ ಹಾಲು ತೆಗೆದುಕೊಂಡು ಮನೆಗೆ ವಾಪಾಸ್ಸಾಗುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.



















