ಬೆಂಗಳೂರು : ಬೀದಿ ನಾಯಿಗಳ ಉಪಟಳ ನಿರಂತರ ಜಾಸ್ತಿಯಾಗಗುತ್ತಿದೆ. ನಿನ್ನೆ ತಡರಾತ್ರಿ ಮೂರು ಗಂಟೆಗೆ ಮನೆಯಿಂದ ಎದ್ದು ಹೊರ ಬಂದಿದ್ದ 68 ವರ್ಷದ ಸೀತಪ್ಪ ಬೀದಿ ನಾಯಿಗಳ ದಾಳಿಗೊಳಗಾಗಿರುವ ಘಟನೆ ಕೊಡಿಗೇಹಳ್ಳಿಯ ಟೆಲಿಕಾಮ್ ಲೇಔಟ್ ನಲ್ಲಿ ನಡೆದಿದೆ.
ಸುಮಾರು ಎಳು ಏಂಟು ನಾಯಿಗಳು ಒಟ್ಟಿಗೆ ದಾಳಿ ಮಾಡಿ ಕೈ ಮೈ ಕಚ್ಚಿ ಗಾಯಗೊಳಿಸಿದ್ದಾವೆ ಎಂದು ತಿಳಿದು ಬಂದಿದೆ. ಬೀದಿ ನಾಯಿಗಳು ಎಲ್ಲಿ ಅಂದರಲ್ಲಿ ಕಚ್ಚಿದ್ದರಿಂದ ಸ್ಥಳದಲ್ಲಿಯೇ ವೃದ್ಧ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.
ಸ್ಥಳದಲ್ಲಿದ್ದ ಬೀಟ್ ಪೋಲೀಸರು ವೃದ್ಧನನ್ನು ನಾಯಿಗಳ ದಾಳಿಯಿಂದ ರಕ್ಷಣೆ ಮಾಡಲು ಹರಸಾಹಸ ಪಟ್ಟರೂ, ಯಾವುದೇ ಪ್ರಯೋಜನವಾಗಿಲ್ಲ.
ಸದ್ಯ, ರಾಮಯ್ಯ ಆಸ್ಪತ್ರೆಯಲ್ಲಿ ಸೀತಪ್ಪನ ಮೃತದೇಹವನ್ನು ಪೊಸ್ಟ್ ಮಾರ್ಟಮ್ ಗಾಗಿ ರವಾನಿಸಲಾಗಿದೆ.
ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ. ಸದ್ಯ, ಯುಡಿಅರ್ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.