ಶಾಸಕ ನಾರಾ ಭರತ್ ರೆಡ್ಡಿ, ಸಂಸದ ಇ. ತುಕರಾಂ, ಡಾ ಶ್ರಿನಿವಾಸ್, ಗಣೇಶ್ ಮನೆ ಮೇಲೆ ಇಡಿ ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶ್ರೀರಾಮುಲು ಮಾತನಾಡಿದ್ದಾರೆ.
ಇವರೆಲ್ಲ ಬಹಳ ಸಾಚಾತರ ಮಾತನಾಡುತ್ತಿದ್ದರು. ಮಾಡುವುದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಅನ್ನೋ ಥರ ಮಾತನಾಡುತ್ತಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮವು ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ಗೊತ್ತಾಯಿತು. ಅಲ್ಲಿಂದ ಇಲ್ಲಿಯವರೆಗೂ ನಾವು ಹೋರಾಟ ಮಾಡುತ್ತಿದ್ದೇವೆ.
ಇದರ ಹಿಂದೆ ಯಾರಿದ್ದಾರೆ ಎಂಬುವುದು ಗೊತ್ತಾಗಬೇಕು? ಆ ಮಹಾ ನಾಯಕ ಯಾರು? ಪ ಜಾತಿ, ಪ .ಪಂಗಡದ ಹಣವನ್ನು ನುಂಗಿ ನೀರು ಕುಡಿದರು. ಆ ಹಣ ಎಲ್ಲಿಗೆ ಹೋಯ್ತು? ಎಲ್ಲೆಲ್ಲೋ ಹಣ ಡ್ರಾ ಮಾಡಿ ರಾಜಕಾರಣಿಗಳು ಬಳಸಿಕೊಂಡಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದರೆ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದ್ದಾರೆ.



















