ಬೆಂಗಳೂರು: ಭಾರತದಲ್ಲಿ ಮದ್ಯಪಾನ ಮಾಡಿ ವಾಹನ ಓಡಿಸುವುದು ಕಾನೂನುಬಾಹಿರ ಮತ್ತು ಅಪಾಯಕಾರಿಯಾದ ಕ್ರಿಯೆ. ಆದರೆ, ಕೆಲವು ಪೊಲೀಸ್ ಅಧಿಕಾರಿಗಳೇ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಕಾನೂನಿನ ವಿರುದ್ಧ ನಡೆದುಕೊಳ್ಳುವ ಉದಾಹರಣೆಗಳು ಆಗಾಗ ವರದಿಯಾಗುತ್ತಿವೆ. ಅಂತೆಯೇ, ಇತ್ತೀಚೆಗೆ ಕೇರಳದಲ್ಲಿ ನಡೆದ ಒಂದು ಘಟನೆ ನಡೆದಿದೆ. ಕೊಚ್ಚಿಯಲ್ಲೊಬ್ಬರು ಡಿವೈಎಸ್‌ಪಿ ಮದ್ಯಪಾನ ಮಾಡಿದ ಸ್ಥಿತಿಯಲ್ಲಿ, ಪೊಲೀಸ್ ಜೀಪ್ ಅಪಾಯಕಾರಿ ರೀತಿಯಲ್ಲಿ ಚಲಾಯಿಸುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನುರಾಮಾ ನ್ಯೂಸ್ ಈ ಘಟನೆಯ ವಿವರಗಳನ್ನು ನೀಡಿ ವಿಶೇಷ ವಿಡಿಯೋ ಹಂಚಿಕೊಂಡಿದೆ.
ಈ ಘಟನೆ ಕುಂಬಳಂ ಟೋಲ್ ಪ್ಲಾಜಾ ಬಳಿ ನಡೆದಿದೆ. ಮಹೀಂದ್ರಾ ಬೊಲೆರೋ ಪೊಲೀಸ್ ವಾಹನವೊಂದು ಪಂಕ್ಷರ್ ಆದ ಸ್ಥಿತಿಯಲ್ಲಿ ನಿಲ್ಲಿಸಲಾಗಿತ್ತು. ಮುಂಭಾಗದ ಟೈರ್ ಹಾಳಾಗಿದ್ದರಿಂದ ಅದು ದುರಸ್ತಿಗೆ ಕಾಯಲಾಗುತ್ತಿತ್ತು. ವಾಹನದ ಮುಂಭಾಗದ ಬಂಪರ್ ಮತ್ತು ನಂಬರ್ ಪ್ಲೇಟ್ ಹಾನಿಗೊಳಗಾಗಿತ್ತು. ಈ ವಾಹನದ ಮುಂಭಾಗದ ಸೀಟಿನಲ್ಲಿ ಇಬ್ಬರು ಮಲಗಿದ್ದರು. ಸಂಜೆ 6 ಗಂಟೆಗೆ ಟೈರ್ ರಿಪೇರಿ ಮಾಡಿದ ನಂತರ ಪಕ್ಕದಲ್ಲಿ ಕುಳಿತ ವ್ಯಕ್ತಿ ಚಾಲಕರ ಸೀಟ್ಗೆ ಸ್ಥಳಾಂತರಗೊಂಡಿದ್ದರು. ಅವರೂ ಸಮತೋಲನ ಕಳೆದುಕೊಂಡಂತೆ ಕಾಣುತ್ತಿದ್ದರು.

ಮಾಧ್ಯಮ ಸಿಬ್ಬಂದಿಗಳು ಕಾರಿನ ಬಳಿ ಹೋದಾಗ, ವಾಹನದ ಚಾಲಕನಿಂದ ರೇಡಿಯೇಟರ್… ಕೂಲಂಟ್ ಕಡಿಮೆಯಾಗಿದೆ ಅನ್ನಿಸುತ್ತಿದೆ ಎಂಬ ಉತ್ತರ ಬಂದಿತ್ತು. ವಿಡಿಯೋದಲ್ಲಿ ಅವರು ಸಂಪೂರ್ಣವಾಗಿ ಮದ್ಯಪಾನ ಮಾಡಿದಂತೆ ಕಾಣುತ್ತದೆ. ಕಾರಿನ ಒಳಗೆ ಸುಮಾರು 5 ವರ್ಷದ ಮಗು ಮಲಗಿರುವುದು ಕಂಡುಬಂದಿತು. ಅಲ್ಲದೆ, ವಾಹನದ ಹಿಂದೆ, ಲಗೇಜ್ ಇತ್ತು.
ಮದ್ಯಪಾನ ಮಾಡಿದ ಪೊಲೀಸರ ಜೊತೆಯಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಾಧ್ಯಮ ಸಿಬ್ಬಂದಿಗಳನ್ನು ಬೇಡಿಕೊಂಡು ಈ ಪ್ರಕರಣವನ್ನು ಮುಚ್ಚಿಹಾಕಲು ಒತ್ತಾಯಿಸಿದರು. ಆದರೆ, ಮಾಧ್ಯಮ ತಂಡ ವಿಡಿಯೊ ರೆಕಾರ್ಡ್ ಮುಂದುವರಿಸಿತ್ತು. ಸ್ವಲ್ಪ ಹೊತ್ತಿನ ನಂತರ, ಬೊಲೆರೋ ಮತ್ತೆ ಹೊರಟಿತ್ತು. ಮಾಧ್ಯಮ ತಂಡದ ಎಚ್ಚರಿಕೆಗಳನ್ನು ಉಲ್ಲಂಘಿಸಿ, ಈ ಡಿವೈಎಸ್‌ಪಿ ವಾಹನ ಚಲಾಯಿಸುತ್ತಾ ಅಲ್ಲಿಂದ ತೆರಳಿದ್ದರು.,
ವಾಹನವು ದಕ್ಷಿಣದ ತಿರುವನಂತಪುರಂ ಕಡೆಗೆ ಚಲಿಸಲು ಆರಂಭಿಸಿತು. ಅವರ ಚಾಲನೆಯು ಅಪಾಯಕಾರಿ ರೀತಿಯಲ್ಲಿತ್ತು. , ಅಚಾನಕ್ ವೇಗ ಹೆಚ್ಚಿಸುವುದು ಮತ್ತು ಏಕಾಏಕಿ ತಿರುವುಗಳನ್ನು ತೆಗೆದುಕೊಳ್ಳುತ್ತಿದ್ದರು. ಮನುರಾಮಾ ಮಾಧ್ಯಮ ತಂಡ ಸುರಕ್ಷಿತ ಅಂತರ ಕಾಯ್ದುಕೊಂಡು ಅವರ ವಾಹನವನ್ನು ಹಿಂಬಾಲಿಸಿತ್ತು ಇದನ್ನು ಗಮನಿಸಿದ ಡಿವೈಎಸ್‌ಪಿ, ಮಾಧ್ಯಮ ಸಿಬ್ಬಂದಿಯನ್ನು ತಪ್ಪಿಸಿಕೊಳ್ಳಲು ಯೂ-ಟರ್ನ್ ತೆಗೆದುಕೊಂಡು ಮತ್ತೆ ಕೊಚ್ಚಿ ಕಡೆಗೆ ಹಿಂತಿರುಗಿ ಮತಗ್ತೆ ತಿರುವನಂತಪುರಂ ಮಾರ್ಗವನ್ನು ಹಿಡಿದಿದ್ದರು.
ಮಾಧ್ಯಮ ತಂಡ ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳನ್ನ ಸಂಪರ್ಕಿಸಲು ಪ್ರಯತ್ನಿಸಿದರೂ, ಯಾವುದೇ ಸ್ಪಂದನೆ ದೊರಕಲಿಲ್ಲ. ಕೆಲಕಾಲ ನಂತರ, ಕುತೀಯಾತೋಡ್ ಬಳಿ ಬೊಲೆರೋ ನಿಂತಿತು . ಡಿವೈಎಸ್‌ಪಿ ಕಾರಿನಿಂದ ಇಳಿದು, ಸಮತೋಲನ ಕಳೆದುಕೊಂಡು ನಿಲ್ಲಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಕಾರಿನ ಎಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡಿತು.
ಸ್ವಲ್ಪ ಹೊತ್ತಿನ ನಂತರ, ವಾಹನವು ಮತ್ತೆ ಸ್ಟಾರ್ಟ್ ಆದರೂ, 10 ನಿಮಿಷಗಳ ನಂತರ ಅದು ಮತ್ತೊಮ್ಮೆ ನಿಂತಿತು . ಈ ಬಾರಿ, ಎಂಜಿನ್ ಸಂಪೂರ್ಣ ಹಾಳಾದಂತಿತ್ತು. ಮಾಧ್ಯಮ ಸಿಬ್ಬಂದಿಯೊಬ್ಬರು “ಇದು ವಾಹನ ಓಡಿಸುವ ಸರಿಯಾದ ವಿಧಾನವೇ?” ಎಂದು ಕೇಳಿದಾಗ, ಅವರು “ನಾವು ಆಸ್ಪತ್ರೆಗೆ ಹೋಗುತ್ತಿದ್ದೇವೆ” ಎಂದು ಉತ್ತರಿಸಿದ್ದರು.
ಬಳಿಕ ಅರೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮದ್ಯಪಾನ ಮಾಡಿದ ಚಾಲಕನನ್ನು ವಶಕ್ಕೆ ಪಡೆದರು. ಮಾಧ್ಯಮ ಸಿಬ್ಬಂದಿಯ ತೀವ್ರ ಹಿಂಬಾಲನೆಯೊಂದಿಗೆ ಈ ಡಿವೈಎಸ್‌ಪಿಯನ್ನು ಠಾಣೆಗೆ ಕರೆದೊಯ್ಯಲಾಯಿತು. ವಿಚಾರಣೆ ವೇಳೆ, ಈ ವ್ಯಕ್ತಿ ಕೇರಳ ರಾಜ್ಯ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (CRB) ಡಿವೈಎಸ್‌ಪಿ ವಿ. ಅನಿಲ್ ಕುಮಾರ್ ಎಂಬುದು ಬಹಿರಂಗವಾಯಿತು. ಅವರ ಮೇಲೆ ಅಧಿಕೃತ ವಾಹನವನ್ನು ಖಾಸಗಿ ಉದ್ದೇಶಗಳಿಗೆ ಬಳಸಿಕೊಂಡು, ಮದ್ಯಪಾನ ಮಾಡಿ ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿದ ಆರೋಪದಡಿ ಕೇಸು ದಾಖಲಿಸಲಾಗಿದೆ.