ಕೋಲಾರ: ನಶೆಯಲ್ಲಿ ಶುರುವಾದ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಈ ಘಟನೆ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ನಗರದ ಹೊರವಲಯದಲ್ಲಿರುವ ಬಾರ್ ಎದುರು ನಡೆದಿದೆ.
ಹೈದರ್ ನಗರ ನಿವಾಸಿ ಮತೀನ್ (25) ಕೊಲೆಯಾದ ವ್ಯಕ್ತಿ. ಮೊಯಿನ್ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ. ಇವರಿಬ್ಬರೂ ಸ್ನೇಹಿತರು ಎನ್ನಲಾಗಿದೆ. ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಇದು ವಿಕೋಪಕ್ಕೆ ತೆರಳಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಾರ್ನಲ್ಲಿ ಕುಡಿದ ನಂತರ ಮತೀನ್ ಹಾಗೂ ಮೊಯಿನ್ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಮತೀನ್ ಸ್ನೇಹಿತ (Friends) ಮೊಯಿನ್ನನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಕೋಪಗೊಂಡ ಮೊಯಿನ್ ಕಬ್ಬಿಣದ ರಾಡ್ನಿಂದ ಮತೀನ್ಗೆ ಇರಿದು ಪರಾರಿಯಾಗಿದ್ದಾನೆ. ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.