ಬೆಂಗಳೂರು: ನಗರದಲ್ಲಿ ಚಾಲಕನೋರ್ವ, ಜನ ಸಂದಣಿ ಪ್ರದೇಶದಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಇಬ್ಬರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ. ಅಲ್ಲದೇ, ಕೆಲವು ವಾಹನಗಳು ಜಖಂ ಆಗಿ, ಓರ್ವನ ಕಾಲು ಕಟ್ ಆಗಿದೆ.
ನಗರದ ನಾಗರಭಾವಿಯ ಅಂಬೇಡ್ಕರ್ ಕಾಲೇಜು ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಅತಿ ವೇಗವಾಗಿ ಕಾರು ಚಲಾಯಿಸಿದ್ದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರು ಗುದ್ದಿರುವ ರಭಸಕ್ಕೆ ಬೈಕ್ ಗಳು ಪುಡಿ ಪುಡಿಯಾಗಿವೆ.
ಪುನೀತ್ ಎಂಬುವವರ ಕಾರು ಚಾಲಕನಿಂದ ಈ ಘಟನೆ ನಡೆದಿದೆ. ಹೊಂಡಾ ಸಿಟಿ ಕಾರನ್ನು ಅಡ್ಡಾದಿಡ್ಡಿ ಓಡಿಸಿದ್ದಾನೆ. ಘಟನೆಯಲ್ಲಿ ಒಟ್ಟು 7 ಬೈಕ್ ಗಳು ಸಂಪೂರ್ಣ ಜಖಂ ಆಗಿವೆ. ಸದ್ಯ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಜ್ಞಾನಭಾರತಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.