ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ರಕ್ಷಣಾ ಲೋಹಶಾಸ್ತ್ರ ಸಂಶೋಧನಾ ಪ್ರಯೋಗಾಲಯ (DMRL)ದಲ್ಲಿ ಖಾಲಿ ಇರುವ 80 ಹುದ್ದೆಗಳ ನೇಮಕಾತಿಗೆ (DRDO DMRL ITI Apprentices Recruitment 2025) ಅಧಿಸೂಚನೆ ಹೊರಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನವಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಡಿಫೆನ್ಸ್ ಮೆಟಲರ್ಜಿಕಲ್ ರಿಸರ್ಚ್ ಲ್ಯಾಬೊರೇಟರಿ
ಒಟ್ಟು ಹುದ್ದೆಗಳು: 80
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಹುದ್ದೆಗಳ ಹೆಸರು: ಅಪ್ರೆಂಟಿಸ್
ಐಟಿಐ ಪಾಸಾದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಎಲ್ಲ ಹುದ್ದೆಗಳು ಕೂಡ ಅಪ್ರೆಂಟಿಸ್ ಹುದ್ದೆಗಳಾಗಿವೆ. ವೆಲ್ಡರ್ 2, ಟರ್ನರ್ 5, ಮಷಿನಿಸ್ಟ್ 10, ಫಿಟ್ಟರ್ 12, ಎಲೆಕ್ಟ್ರಾನಿಕ್ಸ್ 6, ಎಲೆಕ್ಟ್ರಿಷಿಯನ್ 12, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ 30, ಕಾರ್ಪೆಂಟರ್ 2 ಮತ್ತು ಫೋಟೋಗ್ರಾಫರ್ 1 ಹುದ್ದೆ ಸೇರಿವೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ. ಹಾಗೆಯೇ, ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ, ಬದಲಿಗೆ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ಶಿಪ್ ನಿಯಮಗಳ ಪ್ರಕಾರ ಸ್ಟೈಪೆಂಡ್ ಕೂಡ ನೀಡಲಾಗುತ್ತದೆ. ಆಸಕ್ತಿ ಇರುವ ಅಭ್ಯರ್ಥಿಗಳು www.apprenticeshipindia.gov.in ಗೆ ಭೇಟಿ ಅರ್ಜಿ ಸಲ್ಲಿಸಬಹುದು.



















