ದೊಡ್ಮನೆ ಈಗ ವಿಲನ್ ಮನೆ ಆಗಿದೆ. ವಿಲನ್ ವಿಚಿತ್ರ ಟಾಸ್ಕ್ ನೀಡುತ್ತಿದ್ದಾರೆ. ಈಗಾಗಲೇ ರಜತ್ ಮತ್ತು ಅಶ್ವಿನಿ ಗೌಡ ಅವರಿಗೆ ವಿಲನ್ ಒಂದು ಚಾಲೆಂಜ್ ನೀಡಿದರು. ಆ ಚಾಲೆಂಜ್ ಕಂಪ್ಲೀಟ್ ಮಾಡಿದರೆ ಪಾಂಯಿಟ್ಸ್ ಸಿಗುತ್ತದೆ. ನಿನ್ನೆ ಕಾವ್ಯ ಅವರಿಗೆ ಕೂದಲಿಗೆ ಬಣ್ಣ ಹಾಕಿಸಿಕೊಂಡರೆ, ರಜತ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೀಗ ಮಾಳು ಫನ್ನಿ ಕೇರ್ ಕಟ್ ಮಾಡಿದ ಹೊಸ ಪ್ರೋಮೋ ಔಟ್ ಆಗಿದೆ.
ಇದೀಗ ವಿಲನ್ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಚಿತ್ರದಲ್ಲಿ ತೋರಿಸುವಂತೆ ಹೇರ್ ಸ್ಟೈಲ್ ಮಾಡಿಸಿಕೊಳ್ಳಬೇಕಿದೆ.ಈ ವೇಳೆ ಗಿಲ್ಲಿ ಸಖತ್ ಉರಿಸಿದ್ದಾರೆ. ಮಾಳು ಅವರನ್ನ ನೋಡಿ ಸಖತ್ ಹೊಟ್ಟೆ ಉರಿಯುತ್ತಿದೆ ಎಂದಿದ್ದಾರೆ. ಮಾಳು ಅವರು ಫೋಟೋ ಏನಾದರೂ ಮುಂಚೆ ನೋಡಿದ್ದರೆ ಸತ್ಯ ಒಪ್ತಾ ಇರಲಿಲ್ಲ. ತುಂಬಾ ಕೂದಲು ಉದ್ದ ಇರೋರು ಇದ್ರು ಅಂತ ಧ್ರುವಂತ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ನಿನ್ನೆಯ ಎಪಿಸೋಡ್‌ನಲ್ಲಿ ರಜತ್ ಅವರು ಟ್ಯಾಟು ಹಾಕಿಸಿಕೊಂಡಿದ್ದರು. ‘ನಾನು ತರಬೇತಿ ಪಡೆದ ಟ್ಯಾಟೂ ಕಲಾವಿದರಿಂದ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದೇನೆ. ಇದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ’ ಎಂದು ಬರೆದುಕೊಟ್ಟು ರಜತ್ ಅವರು ಸಹಿ ಮಾಡಿದ್ದಾರೆ. ಹಾಗೂ ಕಾವ್ಯ ಅವರಿಗೆ ವಿಲನ್ ಹೇಳೋವರೆಗೂ ತಲೆಗೆ ಕಲರ್ ಹಾಕಿಯೇ ಇರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಗ್ರೀನ್ ಎನರ್ಜಿ ಕಾರಲ್ಲಿ ಸಂಸತ್‌ಗೆ ಬಂದ ಇಂಧನ ಸಚಿವ | ದೇಶದ ಜನರ ಚಿತ್ತ ‘ಜೋಶಿ’ಯತ್ತ!



















