ಬೆಂಗಳೂರು: ಕೊಲೆ ಪ್ರಕರಣದ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ (Pavithra Gowda) ಠಾಣೆಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ವೈದ್ಯರು ಅದರ ಕಾರಣ ತಿಳಿಸಿದ್ದಾರೆ.
ಲೋ ಬಿಪಿಯಿಂದಾಗಿ ಪವಿತ್ರಾಗೌಡ ಕುಸಿದು ಬಿದ್ದಿರುವುದಾಗಿ ವೈದ್ಯೆ ಸವಿತಾ ಹೇಳಿದ್ದಾರೆ. ಪ್ರತಿದಿನ ರೆಗ್ಯುಲರ್ ಚೆಕಪ್ ಮಾಡಲಾಗುತ್ತದೆ. ನಾನೇ ಠಾಣೆಗೆ ಹೋಗಿ ಎಲ್ಲರನ್ನೂ ಚೆಕಪ್ ಮಾಡುತ್ತಿದ್ದೆ. ಆದರೆ, ಪವಿತ್ರಾ ಇಂದು ಬೆಳಿಗ್ಗೆಯಿಂದ ಸರಿಯಾಗಿ ತಿಂಡಿ, ಊಟ ಮಾಡಿಲ್ಲ. ಹೀಗಾಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಯಿತು ಎಂದು ಹೇಳಿದ್ದಾರೆ.
ಈಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಉಳಿದ ಆರೋಪಿಗಳ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಹೇಳಿದ್ದಾರೆ.