ಮಂಡ್ಯ: ಕೇವಲ 8 ತಿಂಗಳ ಬಂಡೂರು ತಳಿಯ ಟಗರು (Bandur Breed Ram) ಭಾರೀ ಬೆಲೆಗೆ ಮಾರಾಟವಾಗಿ ಸದ್ದು ಮಾಡುತ್ತಿದೆ.
ಈ ಪುಟ್ಟ ಟಗರು ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಈ ಸುದ್ದಿ ಕೇಳಿ ರೈತರು (Farmers) ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ಕಿರುಗಾವಲು ಗ್ರಾಮದ ಉಲ್ಲಾಸ್‌ಗೌಡ (Ullas Gowda) ಎಂಬುವವರಿಗೆ ಸೇರಿದ ಬಂಡೂರು ತಳಿ ಟಗರು ಈ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. 8 ತಿಂಗಳ ಹಿಂದೆ ಉಲ್ಲಾಸ್ ಮನೆಯಲ್ಲಿಯೇ ಈ ಬಂಡೂರು ಟಗರು ಜನಸಿತ್ತು. ಆನಂತರ ಕೆಲವೇ ದಿನಗಳಲ್ಲಿ ಇದನ್ನು ಟಿ.ನರಸೀಪುರದ ಮೂಲದ ವ್ಯಕ್ತಿಯೊಬ್ಬರಿಗೆ 20 ಸಾವಿರ ರೂ.ಗೆ ಮಾರಾಟ ಮಾಡಲಾಗಿತ್ತು.
ಮಾರಾಟ ಮಾಡಿದ ನಂತರ ಮತ್ತೆ ಆ ಟಗರನ್ನು 50 ಸಾವಿರ ರೂ.ಗೆ ಉಲ್ಲಾಸ್ ಹಾಗೂ ಅವರ ತಂದೆ ಮನೋಹರ್ ಖರೀದಿಸಿದ್ದರು. ಈಗ ಶಿವಮೊಗ್ಗ ಮೂಲದ ಉದ್ಯಮಿ ಜವಾದ್ ಬರೋಬ್ಬರಿ 1.48 ಲಕ್ಷ ರೂ. ಹಣ (money)ಕೊಟ್ಟು ಖರೀದಿಸಿದ್ದಾರೆ.
ಮಾರಾಟವಾದ ಈ ಬಂಡೂರು ಟಗರಿಗೆ ವಿಶೇಷ ಪೂಜೆ ಸಲ್ಲಿಸಿ ನೀಡಲಾಯಿತು. ಈ ತಳಿಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈ ದರ ಕೊಟ್ಟು ಖರೀದಿಸಲಾಗಿದೆ ಎಂದು ತಿಳಿದು ಬಂದಿದೆ.