ಜಗತ್ತನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಆಸೆ ಯಾರಿಗೆ ತಾನೆ ಇರಲ್ಲ ಹೇಳಿ. ಹೀಗೆ ದೇಶ ಸುತ್ತಬೇಕು ಅಂದ್ರೆ ಪಾಸ್ ಪೋರ್ಟ್ ಬೇಕೇ ಬೇಕು. ಹಾಗಂತಾ ಈ ಪಾಸ್ ಪಾರ್ಟ್ ಮಾಡಿಸುವುದಕ್ಕೆ ಎಷ್ಟು ಖರ್ಚು ಬರುತ್ತೆ ಗೊತ್ತಾ? ಜಗತ್ತಿನಲ್ಲೇ ಅತ್ಯಂತ ದುಬಾರಿ ಪಾಸ್ ಪಾರ್ಟ್ ಯಾವುದು ಗೊತ್ತಾ? ವಿಶ್ವದ ಅತ್ಯಂತ ದುಬಾರಿ ಪಾಸ್ ಪೋರ್ಟ್ ಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಜಾಗತಿಕ ಪಾಸ್ ಪೋರ್ಟ್ ಇಂಡೆಕ್ಸ್ ಈ ಲಿಸ್ಟ್ ರಿಲೀಸ್ ಮಾಡಿದ್ದು, ಯಾವ ದೇಶದಲ್ಲಿ ಪಾಸ್ ಪೋರ್ಟ್ ಮಾಡಿಸಲು ಎಷ್ಟು ಖರ್ಚು ಬರುತ್ತೆ ಅನ್ನೋ ಲೆಕ್ಕದಲ್ಲಿ ಅದನ್ನ ದುಬಾರಿ ಅಂತಾ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಅತ್ಯಂತ ಅಗ್ಗದ ಪಾಸ್ ಪೋರ್ಟ್ ಯುಎಇ ಹೆಸರಲ್ಲಿದೆ. ಇಲ್ಲಿ ಕೇವಲ 1400 ರೂಪಾಯಿ ಇದ್ದರೆ, ನಿಮ್ಮ ಪಾಸ್ ಪೋರ್ಟ್ ಆಗಿಬಿಡುತ್ತೆ. ಮೊದಲನೇ ಸ್ಥಾನಕ್ಕೆ ಬಂದರೆ, ರಾರಾಜಿಸುತ್ತಿರುವುದು ಮೆಕ್ಸಿಕೋದ ಪಾಸ್ ಪೋರ್ಟ್ ಇಲ್ಲಿ 19,481 ರೂಪಾಯಿ ಖರ್ಚಾಗುತ್ತೆ.
10 ವರ್ಷಗಳ ಆಯುಷ್ಯ ಹೊಂದಿರುತ್ತೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದ್ದು ಇಲ್ಲಿ 10,041 ರೂಪಾಯಿ ಖರ್ಚಾಗುತ್ತೆ. ಉಳಿದಂತೆ ಮೂರನೇ ಸ್ಥಾನದಲ್ಲಿ ಅಮೆರಿಕ ಮಿಂಚುತ್ತಿದ್ದು, 13.868 ಖರ್ಚಾಗುತ್ತೆ. ಉಳಿದಂತೆ ಭಾರತ ಈ ಪಟ್ಟಿಯಲ್ಲಿ ಅತ್ಯಂತ ಅಗ್ಗದ ಪಟ್ಟಿಯಲ್ಲಿ ಯುಎಇ ಬಳಿಕದ ಸ್ಥಾನದಲ್ಲಿದೆ ಅಂದ್ರೆ ಕೆಳಗಿನಿಂದ ಎರಡನೇ ಸ್ಥಾನದಲ್ಲಿದೆ. ನಮ್ಮಲ್ಲಿ ಪಾಸ್ ಪೋರ್ಟ್ ಗೆ 1,524 ರೂಪಾಯಿ ಮಾತ್ರ ವೆಚ್ಚ ತಗಲುತ್ತೆ.