ಮಲಯಾಳಂ ಚಿತ್ರರಂಗ ಈಗ ಲೈಂಗಿಕ ದೌರ್ಜನ್ಯದ ಸುದ್ದಿಯಲ್ಲಿ ನಲುಗಿ ಹೋಗುತ್ತಿದೆ. ಹೇಮಾ ಸಮಿತಿ ವರದಿಯು ಬಹಿರಂಗವಾಗುತ್ತಿದ್ದಂತೆ ಈಗ ಅಲ್ಲಿ ಅದೇ ಸದ್ದು ಎನ್ನುವಂತಾಗಿ ಬಿಟ್ಟಿದೆ.
ಹಲವಾರು ಸೆಲೆಬ್ರಿಟಿಗಳು ಹಲವು ವಿಷಯಗಳ ಕುರಿತು ಅಚ್ಚರಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬೆನ್ನಲ್ಲೇ ಅನೇಕ ದಕ್ಷಿಣದ ಹೀರೋಯಿನ್ ಗಳು ಈ ಕುರಿತು ಮಾತನಾಡುತ್ತಿದ್ದಾರೆ. ನಮ್ಮಲ್ಲಿಯೂ ಈ ರೀತಿಯ ಸಮೀಕ್ಷೆ ಬೇಕು ಎನ್ನುತ್ತಿದ್ದಾರೆ. ಈ ಮಧ್ಯೆ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಶಾಕಿಂಗ್ ವಿಚಾರ ಹೇಳಿದ್ದಾರೆ.
ನಟಿಯರನ್ನು ಬೆತ್ತಲಾಗಿ ನೋಡಲು ಹೀರೋಗಳೇ ವ್ಯಾನಿಟಿ ವ್ಯಾನ್ ನಲ್ಲಿ ಹಿಡನ್ ಕ್ಯಾಮೆರಾಗಳನ್ನು ಇಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ಶೂಟಿಂಗ್ ಸೆಟ್ ನಲ್ಲಿ ವ್ಯಾನಿಟಿ ವ್ಯಾನ್ ನ ಬಳಕೆ ಸಾಕಷ್ಟಿದೆ. ನಾಯಕಿಯರಿಗೆ ಬಟ್ಟೆ ಬದಲಿಸಲು ಈ ವಾಹನ ಸಹಕಾರಿ ಆಗುತ್ತದೆ. ಆದರೆ, ಇದರಲ್ಲಿ ಕ್ಯಾಮೆರಾ ಇಟ್ಟು ಶೂಟ್ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಈ ಪದ್ಧತಿ ಚಾಲ್ತಿಯಲ್ಲಿ ಇದೆ ಎಂದು ಆರೋಪಿಸಿದ್ದಾರೆ.
‘ಸೆಟ್ನಲ್ಲಿ ಪುರುಷರು ನಟಿಯರ ವಿಡಿಯೋ ನೋಡಿ ಎಂಜಾಯ್ ಮಾಡುತ್ತಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ’ ಎಂದು ಹೇಳಿದ್ದಾರೆ. ‘ನಾನು ಕೇರಳದಲ್ಲಿ ಇದ್ದೆ. ಕೆಲವರು ಸೆಟ್ನಲ್ಲಿ ನಿಂತು ನಗುತ್ತಿದ್ದರು. ಏನು ನೋಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ನಟಿಯರು ಬಟ್ಟೆ ಬದಲಿಸುತ್ತಿರುವ ವಿಡಿಯೋ ಇದೆ ಎಂದು ನನಗೂ ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗ ರಾಧಿಕಾ ಅವರ ಹೇಳಿಕೆ ಭಾರೀ ಸಂಚಲನವನ್ನೇ ಮೂಡಿಸಿದೆ. ರಾಧಿಕಾ ಕನ್ನಡದಲ್ಲೂ ನಟಿಸಿದ್ದಾರೆ.