ದಿಢೀರ್ ಬೆಳವಣಿಗೆಯಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಪ್ರಿಯಾಂಕ್ ಬೇಟಿ ತೀವ್ರ ಕುತೂಹಲ ಕೆರಳಿಸಿದ್ದು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಡಿಕೆಶಿ ಮತ್ತು ಪ್ರಿಯಾಂಕಾ ಚರ್ಚಿಸಿದ್ದಾರೆ ಎನ್ನಲಾಗ್ತಿದೆ.
ಈ ವೇಳೆ ಈ ಹಿಂದೆ ಅಧಿಕಾರಕ್ಕೇರುವ ಮುನ್ನ ಮಾಡಿದ್ದ ಸಿಎಂ ಆಗಿಸುವ ವಾಗ್ದಾನದ ಬಗ್ಗೆ ಡಿಕೆಶಿ ಪ್ರಸ್ತಾಪಿಸಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲಾ, ಈ ಅವಧಿಯಲ್ಲೇ ತಮ್ಮನ್ನು ಸಿಎಂ ಮಾಡಲೇ ಬೇಕು ಅಂತಲೂ ಡಿಕೆಶಿ ಒತ್ತಡ ಹಾಕಿದ್ದಾರೆ ಅನ್ನೋ ಮಾತುಗಳಿವೆ.