ಬೆಂಗಳೂರು: ಹೆಬ್ಬಾಳ ಮಾನ್ಯತಾ ಟೆಕ್ಪಾರ್ಕ್ ಬಳಿ ಮಳೆ ಅವಾಂತರ ಹಿನ್ನೆಲೆ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.
ಈ ವೇಳೆ ಮಾತನಾಡಿದ ಅವರು ಮಾನ್ಯತಾ ಎಂಬೆಸ್ಸಿ ಬ್ಯುಸಿನೆಸ್ ಪಾರ್ಕ್ ನಲ್ಲಿ 50ಕ್ಕೂ ಅಧಿಕ ಬಹುರಾಷ್ಟ್ರೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಭಾರೀ ಮಳೆ ಸಂದರ್ಭದಲ್ಲಿ ಪಾರ್ಕ್ ನ ಒಳಭಾಗದಲ್ಲಿ ನೀರು ನಿಂತು ಉದ್ಯೋಗಿಗಳಿಗೆ ಸಮಸ್ಯೆ ಉಂಟಾಗುತ್ತಿದೆ.

ಈ ಬಗ್ಗೆ ಸ್ಥಳ ಪರಿಶೀಲನಾ ಭೇಟಿಯ ವೇಳೆ ಕೆಲವರು ನನ್ನ ಗಮನಕ್ಕೆ ತಂದರು. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಪಾರ್ಕ್ ಒಳಭಾಗದಲ್ಲೂ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆ.

ಎಲ್ಲಿಯೂ ಮಳೆ ನೀರು ನಿಲ್ಲದಂತೆ ಜಾಗೃತೆ ವಹಿಸಲು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ , ಮುಖ್ಯ ಆಯುಕ್ತ ಮಹೃಶ್ವರ್ ರಾವ್ ಸೇರಿದಂತೆ ಹಲವರು ಹಾಜರಿದ್ದರು.