ಉಡುಪಿ (ಶ್ರೀಕೃಷ್ಣ ಮಠ) : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಜಲಪೂರಣ, ಎಣ್ಣೆ ಶಾಸ್ತ್ರದಲ್ಲಿ ಉಭಯ ಶ್ರೀಪಾದರು ಪಾಲ್ಗೊಂಡು ಸಂಭ್ರಮದಿಂದ ಆಚರಿಸಿದರು.
ಜಲಪೂರಣದ ಶಾಸ್ತ್ರದ ನಿಮಿತ್ತ ಮಠದ ಪುರೋಹಿತರು ಕಲಶ ಪೂಜೆ ಮಾಡಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಜಲಪೂರಣ ಶಾಸ್ತ್ರ ನಡೆಸಲಾಯಿತು. ಕೃಷ್ಣಮಠದ ಚಂದ್ರ ಶಾಲೆಯಲ್ಲಿ ಪುತ್ತಿಗೆ ಮಠದ ಉಭಯ ಶ್ರೀಪಾದರು ಗಂಧೋಪಚಾರದೊಂದಿಗೆ ಎಣ್ಣೆ ಶಾಸ್ತ್ರವನ್ನು ನೆರವೇರಿಸಿದರು. ಬಳಿಕ ನೆರೆದಿದ್ದ ಭಕ್ತಾದಿಗಳಿಗೂ ಎಣ್ಣೆ ಶಾಸ್ತ್ರವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು, ಹೊಸ ಚೈತನ್ಯಕ್ಕೆ ಹಬ್ಬಗಳ ಅವಶ್ಯಕತೆ ಇದೆ, ಎಲ್ಲಾ ಭಕ್ತಾದಿಗಳಿಗೆ ಒಳ್ಳೆಯದಾಗಲಿ ಎಂದು ಮುಖ್ಯಪ್ರಾಣ ಶ್ರೀ ಕೃಷ್ಣ ನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.ದೀಪಾವಳಿ ಹಬ್ಬದ ಮಹತ್ವವನ್ನು ನಾಡಿನ ಸಮಸ್ತ ಜನರಿಗೆ ತಿಳಿಸಿ ಶ್ರೀಪಾದರು ಶುಭ ಹಾರೈಸಿದರು.

