ಚಂದನವನದ ನಿರ್ದೇಶಕ ಜೋಗಿ ಪ್ರೇಮ್, ಬಾಲಿವುಡ್ ಅಂಗಳಕ್ಕೆ ಹಾರುವುದು ಪಕ್ಕಾ ಎನ್ನಲಾಗುತ್ತಿದೆ. ಈ ಸುದ್ದಿ ಹಿಂದಿನ ವರ್ಷವೇ ಬ್ರೇಕ್ ಆಗಿತ್ತು. ಈಗ ಪಕ್ಕಾ ಎನ್ನಲಾಗುತ್ತಿದೆ.
ಸದ್ಯ ತಮ್ಮ ನಿರ್ದೇಶನದ ‘ಕೆಡಿ’ ಸಿನಿಮಾದ ಪ್ರಚಾರ ಮತ್ತು ಬಿಡುಗಡೆಯಲ್ಲಿ ತೊಡಗಿಕೊಂಡಿರುವ ಜೋಗಿ ಪ್ರೇಮ್ ಶೀಘ್ರವೇ ಹಿಂದಿ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಕುರಿತು ಟೈಮ್ಸ್ ಎಂಟರ್ಟೈನ್ಮೆಂಟ್ಗೆ ನೀಡಿರುವ ಸಂದರ್ಶನದಲ್ಲಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ‘2024ರಲ್ಲೇ ನಾನು ಹಿಂದಿ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಅದು ರೀಮೇಕ್ ಸಿನಿಮಾ ಆಗಿತ್ತು, ಆದರೆ ನನಗೆ ರೀಮೇಕ್ ಸಿನಿಮಾ ನಿರ್ದೇಶಿಸುವುದು ಇಷ್ಟವಿಲ್ಲದ ಕಾರಣ ನಾನು ನಿರಾಕರಿಸಿದ್ದೆ ಎಂದು ಹೇಳಿದ್ದಾರೆ.
ಸಿನಿಮಾ ಸ್ವಮೇಕ್ ಸಿನಿಮಾಗಳನ್ನು ಮಾತ್ರವೇ ನಿರ್ದೇಶನ ಮಾಡುವುದಾಗಿ ನಾನು ನಿರ್ಮಾಪಕರಿಗೆ ತಿಳಿಸಿದ್ದೇನೆ. ಈಗ ಸಿನಿಮಾದ ಮಾತುಕತೆ ಸಹ ಬಹುತೇಕ ಮುಗಿದಿದ್ದು, ಬಾಲಿವುಡ್ನ ದೊಡ್ಡ ನಟರೊಬ್ಬರೊಡನೆ ಕೆಲಸ ಮಾಡಲಿದ್ದೇನೆ ಎಂದು ಹೇಳಿದ್ದಾರೆ.
ಈ ಸುದ್ದಿ ಕೇಳಿ ಕನ್ನಡ ಸಿನಿಮಾ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.