ಇರಾನ್ ಮೇಲೆ ಯುದ್ಧ ಘೋಷ ಮೊಳಗಿಸಿರುವ ಅಮೆರಿಕ ಇನ್ನಿಲ್ಲದಂತೆ ಬಂಕರ್ ಬ್ಲಸ್ಟರ್ ಬಾಂಬ್ ಗಳನ್ನು ಸ್ಫೋಟಿಸಿದೆ.
ಹಾಗಂತಾ ಅಮೆರಿಕದ ಈ ದಾಳಿಯ ಸುಳಿವು ನೀಡಿತ್ತಾ ಪಿಜ್ಜಾ. ಅರೆ ಇದೇನಪ್ಪಾ, ಪಿಜ್ಜಾಗೂ ಯುದ್ಧಕ್ಕೂ ಏನ್ ಸಂಬಂಧ ಅಂದ್ರಾ, ಅಲ್ಲೇ ಇರುವುದು ಟ್ವಿಸ್ಟ್, ಭಾನುವಾರದ ದಾಳಿಗೂ ಮುನ್ನ, ಅಮೆರಿಕದ ಪೆಂಟಗನ್ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದಲ್ಲಿ ಪಿಜ್ಜಾಗೆ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು.
ಪೆಂಟಗನ್ ಸುತ್ತಮುತ್ತಲ ಪಿಜ್ಜಾ ಕೇಂದ್ರಗಳಿಗೆ ವಿಪರೀತ ಎನ್ನುವಂತಾ ಅರ್ಡರ್ ಗಳು ಬಂದಿದ್ದವು. ಸಹಜವಾಗಿ ದಿನದ ವಹಿವಾಟಿನ 10 ಪಟ್ಟು ಆರ್ಡರ್ ಗಳು ಅಂದು ಬಂದಿದ್ದವು. ಸಹಜವಾಗಿ ದೊಡ್ಡದೊಂದು ನಿರ್ಧಾರ ಕೈಗೊಳ್ಳುವಾಗ ಅಮೆರಿಕದ ಥಿಂಕ್ ಟ್ಯಾಂಕ್ ಆಗಿರುವ ಪೆಂಟಗನ್ ನ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸುತ್ತಾರೆ.
ಹೀಗೆ ಮನೆಯಿಂದ ದೂರವಿರುವ ಅಧಿಕಾರಿಗಳು ತಮಗಾಗಿ ಪಿಜ್ಜಾ ಆರ್ಡರ್ ಮಾಡುತ್ತಾರೆ. ಇರಾನ್ ಮೇಲಿನ ದಾಳಿಯನ್ನು ಕಾರ್ಯರೂಪಕ್ಕೆ ತರುವ ಮುನ್ನವೇ ಅಮೆರಿಕ ದೊಡ್ಡ ಮಟ್ಟದ ಪಿಜ್ಜಾಗಳನ್ನು ಪೆಂಟಗನ್ ಗೆ ತರೆಸಿಕೊಂಡಿದೆ. ಈ ಮೂಲಕ ಪಿಜ್ಜಾ ಖರೀದಿ ಸೂಚ್ಯಂಕ ಏರಿಕೆಯಾಗಿದೆ. ಈ ಮೂಲಕವೇ ಅಮೆರಿಕ ಮಾಧ್ಯಮಗಳು, ದೊಡ್ಡದೊಂದು ಘಟನೆ ನಡೆಯುತ್ತೆ ಅಂತಾ ಪಿಜ್ಜಾಗಳ ಡೆಲವರಿ ಆಧರಿಸಿಯೇ ವರದಿ ಮಾಡಿದ್ದವು.