ಸರ್ಗೋಧಾ….ಪಾಕಿಸ್ತಾನದ ಅತ್ಯಂತ ಸುರಕ್ಷಿತ ಮತ್ತು ಏಳುಸುತ್ತಿನ ಭದ್ರಕೋಟೆ…ಈ ಸರ್ಗೋಧಾ ಪ್ರಾಂತ್ಯದಲ್ಲೇ ಪಾಕಿಸ್ತಾನದ ಡೆಡ್ಲಿ ಅಣ್ವಸ್ತ್ರ ಅಡಗಿರೋದು. ಹಾಗಂತಾ ಇವತ್ತು ಅತಿ ದೊಡ್ಡ ಚರ್ಚೆಗೆ ಕಾರಣವಾಗಿರೋದು ಪಾಕಿಸ್ತಾನದ ಜಂಗಾಬಲವನ್ನೇ ಭಾರತ ಪುಡಿ ಮಾಡಿದೆಯಾ ಅನ್ನೋ ಪ್ರಶ್ನೆ. ಯಾಕೆಂದ್ರೆ ಯಾವ ಅಣ್ವಸ್ತ್ರವನ್ನು ಮುಂದಿಟ್ಟುಕೊಂಡೇ ಪಾಕ್ ಭಾರತವನ್ನು ಹಣಿಯೋ ಲೆಕ್ಕಾ ಹಾಕಿತ್ತೋ ಆ ಬಲವೇ ಚಿಂದಿಯಾಗಿದೆಯಾ ಅನ್ನೋ ಪ್ರಶ್ನೆ ಕಾಡ್ತಿದೆ.
ಪಾಕಿಸ್ತಾನದಲ್ಲಿ ಸರಣಿ ಭೂಕಂಪದ ಹಿಂದಿನ ರಹಸ್ಯವೇನು…?
ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಐತಿಹಾಸಿಕ ಸಮರ ಸಾರಿದೆ. ಕಾಲ್ಕೆರೆದು ಜಗಳಕ್ಕೆ ನಿಂತವರ ಅಂಹಕಾರವನ್ನು ಸದೆ ಬಡಿಯೋ ಸಂಕಲ್ಪ ಮಾಡಿರುವ ಭಾರತ ಈ ಬಾರಿ ಇಸ್ಲಾಮಾಬಾದ್, ಲಾಹೋರ್, ಕರಾಚಿ, ರಾವಲ್ಪಿಂಡಿಯೊಳಗೆ ಹೊಕ್ಕು ಹೊಡೆದಿದೆ. ಆದ್ರೆ ಇದು ಜಗತ್ತಿಗೆ ಗೊತ್ತಿರುವ ಸತ್ಯ. ಬಟ್ ಗೊತ್ತಿದ ದೊಡ್ಡ ಸತ್ಯವೊಂದು ಈಗ ತನ್ನಿಂದ ತಾನೇ ಸಾಕ್ಷ್ಯವನ್ನು ಹೊರಜಗತ್ತಿಗೆ ನುಡಿಯುತ್ತಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮೂರು ದಿನ ಮೂರು ಭೂಕಂಪಗಳು ಘಟಿಸಿವೆ. 4.7, 4 ಹಾಗೂ 4.3ರ ತೀವ್ರತೆಯ ಭೂಕಂಪಗಳು ಸಂಭವಿಸಿವೆ. ಹಾಗಂತಾ ಈ ದಿಢೀರ್ ಭೂಕಂಪನಕ್ಕೆ ವಿಕಿರಣ ಸೋರಿಕೆಯೇ ಪ್ರಮುಖ ಕಾರಣ ಎನ್ನಲಾಗ್ತಿದೆ. ಹಾಗೆ ನೋಡಿದ್ರೆ ಭಾರತದ ದಾಳಿ ವೇಳೆ ಪಾಕಿಸ್ತಾನದ ಸರ್ಗೋಧಾದ ಕಿರಾನಾ ಬೆಟ್ಟಗಳನ್ನೂ ಟಾರ್ಗೆಟ್ ಮಾಡಲಾಗಿತ್ತು ಅನ್ನೋ ವಾದವಿದೆ. ಆದ್ರೆ ಖುದ್ಧು ಸೇನೆಯೇ ಇದನ್ನು ತಳ್ಳಿಹಾಕಿದೆ. ಆದ್ರೆ ಪಾಕಿಸ್ತಾನದಲ್ಲಿ ಘಟಿಸಿದ ಸರಣಿ ಭೂಕಂಪನ ಭಾರತದ ದಾಳಿಯಿಂದ ಅಣ್ವಸ್ತ್ರ ಸೋರಿಕೆಯಿಂದಾಗಿದ್ದು ಅಂತಾ ಭೂಗರ್ಭ ಶಾಸ್ತ್ರಜ್ಞರು ಹೇಳ್ತಿದ್ದಾರೆ.
ವಿಕಿರಣ ಸೋರಿಕೆಯಿಂದಲೇ ಕದನ ವಿರಾಮ ಘೋಷಣೆ
ಮೇ 10ರಿಂದ ಮೂರು ದಿನದಲ್ಲಿ ಮೂರು ಬಾರಿ ಸರ್ಗೋಧಾ ಪ್ರಾಂತ್ಯದಲ್ಲಿ ಭೂಕಂಪನವಾಗಿದೆ. ಇದಕ್ಕೆ ಪಾಕಿಸ್ತಾನದ ಅಣು ಶಸ್ತ್ರಾಗಾರವಿರೋ ಕಿರಾನಾ ಮೇಲೆ ನಡೆದ ದಾಳಿಯೇ ಕಾರಣ ಎನ್ನಲಾಗುತ್ತಿದೆ. ಭಾರತದ ದಾಳಿಗೆ ಪಾಕ್ ಅಣ್ವಸ್ತ್ರ ಸೋರಿಕೆಯಾಗಿದ್ದು ಪರಿಣಾಮವೇ ಭೂಕಂಪನ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅಮೆರಿಕ ಮತ್ತು ರಷ್ಯಾದ ಎರಡು ವಿಮಾನಗಳು ಸರ್ಗೋಧಾಗೆ ಬಂದಿವೆ. ಅಸಲಿಗೆ ಈ ವಿಮಾನಗಳು ಅಣ್ವಸ್ತ್ರ ಸೋರಿಕೆಯನ್ನು ಪತ್ತೆ ಹಚ್ಚೋ ಸಾಮರ್ಥ್ಯ ಹೊಂದಿವೆ ಅನ್ನೋದು ಚರ್ಚೆಯಾಗುತ್ತಿದೆ. ಈ ಅಣ್ವಸ್ತ್ರ ಸೋರಿಕೆಯಿಂದಾಗಿಯೇ ಭಾರತ-ಪಾಕ್ ನಡುವೆ ಅಮೆರಿಕ ಸಂಧಾನ ಮಾಡಿಸಿದೆ ಅನ್ನೋದು ಕೂಡಾ ಚರ್ಚೆಯಾಗುತ್ತಿದೆ.
ಈಜಿಪ್ಟ್ ನಿಂದ ಆಮದಾದ ಆ ವಸ್ತುವಿನ ಮಹತ್ವವೇನು…?
ವಿಕಿರಣ ಸೋರಿಕೆಯಾಗಿದೆ ಅನ್ನೋದಕ್ಕೆ ಮತ್ತೊಂದು ಪ್ರಬಲಸಾಕ್ಷ್ಯ ಪಾಕಿಸ್ತಾನದಲ್ಲೇ ಪತ್ತೆಯಾಗಿದೆ. ಭಾರತ-ಪಾಕ್ ನಡುವೆ ಕದನ ವಿರಾಮವಾಗ್ತಿದ್ದಂತೆ ಪಾಕ್ ನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಅದ್ರಲ್ಲೂ ವಿಕರಣ ಸೋರಿಕೆ ತಡೆಯುವ ಬೋರಾನ್ ರಾಸಾಯನಿಕವನ್ನು ಆಮದು ಮಾಡಿಕೊಳ್ಳಲಾಗಿದೆ. ಈಜಿಪ್ಟ್ ನಿಂದ ಎರಡು ವಿಮಾನಗಳಲ್ಲಿ ಅಪಾರ ಪ್ರಮಾಣದ ಬೋರಾನ್ ಆಮದಾಗಿದೆ. ಅಸಲಿಗೆ ವಿಕಿರಣ ಸೋರಿಕೆ ತಡೆಗೆ ಈ ಬೋರಾನ್ ರಾಸಾಯನಿಕವನ್ನು ಬಳಕೆ ಮಾಡಲಾಗುತ್ತೆ. ಸೋರಿಕೆ ತಟಸ್ಥಗೊಳಿಸುವ ಸಾಮರ್ಥ್ಯ ಈ ರಾಸಾಯನಿಕ್ಕಿದ್ದು, ಅದನ್ನೀಗ ಕಿರಾನಾ ಬೆಟ್ಟ ಪ್ರದೇಶಕ್ಕೆ ರವಾನಿಸಲಾಗುತ್ತಿದೆ.
ಸ್ವಯಂ ಕೃತ ಅಪರಾಧಕ್ಕೆ ಬೆಲೆ ತೆರ್ತಾ…?
ಒಂದೆಡೆ ಕಿರಾನಾ ಬೆಟ್ಟವನ್ನು ಟಾರ್ಗೆಟ್ ಮಾಡಿಲ್ಲ ಅಂತಾ ಭಾರತ ಹೇಳ್ತಿದೆ. ಹಾಗಿದ್ರೆ ಪಾಕಿಸ್ತಾನ ಭಾರತದ ವಿರುದ್ಧ ಅಣ್ವಸ್ತ್ರ ಸಮರಕ್ಕೆ ತಯಾರಿ ಆರಂಭಿಸಿತ್ತಾ. ಈ ಸಿದ್ಧತೆ ವೇಳೆ ವಿಕಿರಣ ಸೋರಿಕೆಯಾಗಿಬಿಡ್ತಾ. ಇದರ ಪರಿಣಾಮವಾಗೇ ಸರ್ಗೋಧಾದ ಅಣ್ವಸ್ತ್ರಗಾರದಲ್ಲಿ ಸೋರಿಕೆಯಾಗಿ ಭೂಕಂಪನ ಘಟಿಸಿದೆ ಅನ್ನೋ ವಾದವೂ ಇದೆ. ಒಟ್ನಲ್ಲಿ ಪಾಕಿಸ್ತಾನದ ಪಾಪದ ಕೊಡವಂತೂ ತುಂಬಿತ್ತಾ ಬರುತ್ತಿರುವುದು ಸ್ಪಷ್ಟ.



















