ಕೊಪ್ಪಳ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕೊಪ್ಪಳದ ಗುಣಮಟ್ಟ ಖಾತ್ರಿ ಘಟಕದಲ್ಲಿನ ಜಿಲ್ಲಾ ಸಲಹೆಗಾರರ ಹುದ್ದೆಯ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಪ್ರತಿ ಆರ್ಥಿಕ ವರ್ಷಗಳಲ್ಲಿ ನವೀಕರಣದ ಷರತ್ತುಗಳನ್ನೊಳಗೊಂಡತೆ ಎನ್.ಎಚ್.ಎಂ ನಿಯಮಾವಳಿಗಳ ಪ್ರಕಾರ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಏಪ್ರಿಲ್ 29ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಮೇ 17 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು https://www.koppal.nic.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಒಂದೇ ಹುದ್ದೆ ಖಾಲಿ ಇರುವ ಕಾರಣ ಯಾವುದೇ ಮೀಸಲಾತಿ ನೀಡಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 42 ಸಾವಿರ ರೂ. ಸಂಬಳ ನೀಡಲಾಗುತ್ತದೆ.
ಅರ್ಹತೆಗಳು ಏನೇನು?
- ಎಂಬಿಬಿಎಸ್, ಡೆಂಟಲ್, ಆಯುಷ್, ನರ್ಸಿಂಗ್ ಪದವಿ, ಪಬ್ಲಿಕ್ ಹೆಲ್ತ್ ಪದವಿ ಅಥವಾ ಪೂರ್ಣಕಾಲಿಕ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಆರೋಗ್ಯ ನಿರ್ವಹಣೆ, ಪಬ್ಲಿಕ್ ಹೆಲ್ತ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
- ಹೆಚ್ಚುವರಿ ಕೋರ್ಸ್ಗಳನ್ನು ಮಾಡಿರುವವರಿಗೆ ಮೊದಲ ಆಧ್ಯತೆ ನೀಡಲಾಗುವುದು.
- ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕದಂದು 45 ವರ್ಷ ದಾಟಿರಬಾರದು.
- ಎರಡು ವರ್ಷಗಳ ಕಾಲ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಆರೋಗ್ಯ ನಿರ್ವಹಣೆ, ಪಬ್ಲಿಕ್ ಹೆಲ್ತ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇರಬೇಕು.
- ಕನ್ನಡ ಓದುವುದು, ಬರೆಯುವುದು ಮತ್ತು ಮಾತನಾಡುವುದು ಕಡ್ಡಾಯವಾಗಿರುತ್ತದೆ.
–
ಅರ್ಜಿಯಲ್ಲಿ ನಮೂದಿಸಿದ ಅಂಕಪಟ್ಟಿ / ಇತರೆ ದಾಖಲಾತಿಗಳಲ್ಲಿ ಯಾವುದೇ ವ್ಯತ್ಯಾಸ ಕಂಡಬಂದಲ್ಲಿ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ನಿಗದಿಪಡಿಸುವ ಸ್ಥಳದಲ್ಲಿ ದಾಖಲಾತಿಗಳ ಪರಿಶೀಲನೆಗೆ ಅವರ ಸ್ವಂತ ಖರ್ಚಿನಲ್ಲಿ ಹಾಜರಾಗುವುದು. ಅಭ್ಯರ್ಥಿಗಳು ಅಪ್ ಲೋಡ್ ಮಾಡಿದ ಮೂಲ ದಾಖಲಾತಿಗಳನ್ನು ಮಾತ್ರ ಪರಿಶೀಲನೆ ಮಾಡಲಾಗುತ್ತದೆ.



















