ಬೆಂಗಳೂರು : ಎಸ್ಐಟಿ ವರದಿಯನ್ನು ತ್ವರಿತಗತಿಯಲ್ಲಿ ಸಲ್ಲಿಸುವಂತೆ ನಾವು ಹೇಳುವುದಕ್ಕೆ ಸಾಧ್ಯವಿಲ್ಲ, ತನಿಖೆ ಪೂರ್ಣಗೊಳ್ಳದೆಯೂ ಅವರು ವರದಿ ಸಲ್ಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ತನಿಖೆ ಮುಗಿಯುವವರೆಗೆ ಯಾವ ವಿಚಾರವನ್ನು ಅವರು ಹೇಳುವಂತಿಲ್ಲ, ನಾವು ಕೂಡ ಹೇಳುವಂತಿಲ್ಲ. ತನಿಖೆಯನ್ನು ಆದಷ್ಟು ಬೇಗ ಮಾಡಿ ಎಂದಷ್ಟೇ ಹೇಳಬಹುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಪರಮೇಶ್ವರ್, ಎಸ್ಐಟಿ ಅವರಿಗೆ ಕೊಟ್ಟ ನಿಯಮಗಳು ಹಾಗೂ ಆಧಾರದ ಮೇಲೆ ತನಿಖೆ ನಡೆಯುತ್ತದೆ. ಪ್ರಕರಣಕ್ಕೆ ಪೂರಕವಾದ ಯಾವುದೇ ಮಾಹಿತಿ ಲಭ್ಯವಾದರೂ ಅದರ ಆಳ ಅಗಲ ತನಿಖೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.
ಮಾತ್ರವಲ್ಲದೇ, ಎಸ್.ಐ.ಟಿ ಅವರಿಗೆ ನಾವು ಯಾವುದೇ ನಿರ್ದೇಶನ ನೀಡಿಲ್ಲ. ಸೌಜನ್ಯ ತಾಯಿ ಅವರು ನೀಡಿದ ದೂರಿನ ಬಗ್ಗೆ ಎಸ್.ಐ.ಟಿ ಅವರೇ ನಿರ್ಧಾರ ಮಾಡುತ್ತಾರೆ. ಯಾವುದೇ ಸಮಯದ ನಿರ್ದಿಷ್ಟತೆಯನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.