ಬೆಳ್ತಂಗಡಿ : ಧರ್ಮಸ್ಥಳ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಅಸಹಜ ಸಾವಿಗೀಡಾದ ಶವಗಳನ್ನು ʼಪ್ರಭಾವಿʼಯೊಬ್ಬರ ನಿರ್ದೇಶನದಲ್ಲಿ ಹೂತಿದ್ದೇನೆ ಎಂದು ಆರೋಪಿಸಿ ಬಂದಿದ್ದ ಸಾಕ್ಷಿ ದೂರುದಾರನೇ ಈಗ ಆರೋಪಿಯಾಗಿದ್ದಾನೆ. ಆರೋಪಿ ಚಿನ್ನಯ್ಯನ ಮೇಲೆ ಅನುಮಾನ ಬಂದು ಆತನನ್ನು ತೀವ್ರವಾಗಿ ಎಸ್.ಐ.ಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಕೆಲವೆಡೆ ಮಹಜರು ಪ್ರಕ್ರಿಯೆ ನಡೆಸಿದೆ.
ನಿನ್ನೆ(ಮಂಗಳವಾರ)ಯೂ ದಿನವಿಡೀ ಚಿನ್ನಯ್ಯನ ವಿಚಾರಣೆಯನ್ನು ಎಸ್.ಐ.ಟಿ ಅಧಿಕಾರಿಗಳು ಮಾಡಿದ್ದಾರೆ. ಪ್ರಸ್ತುತ 11 ದಿನಗಳ ಕಸ್ಟಡಿ ಮುಗಿದಿದ್ದು, 12ನೇ ದಿನವಾದ ಇಂದು(ಬುಧವಾರ) ಚಿನ್ನಯ್ಯನನ್ನು ಎಸ್.ಐ.ಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಇನ್ನೂ ಕೆಲವಡೆ ಮಹಜರು ಪ್ರಕ್ರಿಯೆ ಹಾಗೂ ವಿಚಾರಣೆ ಮಾಡುವುದಕ್ಕೆ ಬಾಕಿ ಇರುವ ಕಾರಣ ಮತ್ತಷ್ಟು ದಿನಗಳ ಕಾಲ ಚಿನ್ನಯ್ಯನನ್ನು ಕಸ್ಟಡಿಗೆ ಕೋರುವ ಸಾಧ್ಯತೆ ಇದೆ.



















