ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಮತ್ತೆ ಮಹತ್ವದ ತಿರುವು ಪಡೆದುಕೊಂಡಿದೆ. ದೂರುದಾರ ಚಿನ್ನಯ್ಯನ ವಿಚಾರಣೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಇದೀಗ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಆರೋಪಿ ಚಿನ್ನಯ ಜೊತೆ ಎಸ್ಐಟಿ ಅಧಿಕಾರಿಗಳು ಉಜಿರೆ ಬಳಿ ಇರುವ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಸರ್ಚ್ ವಾರಂಟ್ ಪಡೆದ ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಮನೆ ಪರಿಶೋಧನೆ, ಸ್ಥಳ ಮಹಜರು ನಡೆಸಲು ದಿಢೀರ್ ದಾಳಿ ನಡೆಸಿದ್ದಾರೆ.
ಚಿನ್ನಯ್ಯ ವಿಚಾರಣೆ ವೇಳೆ ಮಹೇಶ್ ತಿಮರೋಡಿ ಮನೆಯಲ್ಲಿ ಆಶ್ರಯ ನೀಡಲಾಗಿತ್ತು ಎಂದು ಹೇಳಿದ್ದ. ಆರೋಪಿ ಚಿನ್ನಯ್ಯ ಉಳಿದುಕೊಂಡಿದ್ದ ಹಿನ್ನಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ತಿಮರೋಡಿ ಮನೆ ಪ್ರವೇಶಿಸಿದ್ದಾರೆ. ಮನೆ ಮೇಲೆ ದಾಳಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್ಐಟಿ ಅಧಿಕಾರಿಗಳು ಮಂಗಳೂರು, ಬಂಟ್ವಾಳ, ಪುತ್ತೂರು ಭಾಗದಿಂದ ಪೊಲೀಸರ ಕರೆಸಿಕೊಂಡಿದ್ದಾರೆ.
ಇನ್ನು, ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಭಾರಿ ಬಿಗಿ ಭದ್ರತೆಯಲ್ಲಿ ತಿಮರೋಡಿ ಮನೆ ಪರಿಶೀಲನೆ ನಡೆಯುತ್ತಿದೆ. ಬೆಳ್ಳಂಬೆಳಗ್ಗೆ ತಿಮರೋಡಿ ಹಾಗೂ ಆತನ ಗ್ಯಾಂಗ್‌ಗೆ ಆತಂಕ ಮೂಡಿದ್ದು. ಮನೆ ಪರಿಶೋಧನೆ ಬಳಿಕ ತಿಮರೋಡಿಯನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆಯೇ ? ಎಂಬ ಚರ್ಚೆಗಳು ಶುರುವಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧ ನಡೆಸಲಿರುವ ಅಧಿಕಾರಿಗಳು, ಸಾಕ್ಷಿ ಸಂಗ್ರಹಿಸಲಿದ್ದಾರೆ.