ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್.ಎಮ್.ಡಿ ಇಂದು(ರವಿವಾರ, ಆ.24) ಮಧ್ಯಾಹ್ನ 1 ಗಂಟೆಗೆ ಬಂದು ಸಂಜೆ 6 ಗಂಟೆಗೆ ವಿಚಾರಣೆಯಲ್ಲಿ ಹಾಜರಾಗಿ, ವಿಚಾರಣೆ ಮುಗಿಸಿ ಕಾರಿನಲ್ಲಿ ವಕೀಲರ ಜೊತೆ ವಾಪಸ್ ತೆರಳಿದ್ದಾನೆ.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಇಂದು ದಾಖಲೆ ಮೂಲಕ ವಿಚಾರಣೆ ನಡೆಸಿದ್ದಾರೆ. ನಾಳೆ(ಆ.25) ಸೋಮವಾರದಂದು ಮತ್ತೆ ವಿಚಾರಣೆಗೆ ಬರಲು ನೋಟಿಸ್ ನೀಡಿ ಸೂಚನೆ ಕೊಟ್ಟು ದಾಖಲೆಗಳಿಗೆ ಸಹಿ ಪಡೆದು ಸಮೀರ್ ನನ್ನು ಕಳುಹಿಸಿದ್ದಾರೆ.
ಎಐ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಮತ್ತು ಮೊಬೈಲ್ ವಶಕ್ಕೆ ಪಡೆಯಲು ಬಾಕಿ ಇರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸಮೀರ್ ವಾಯ್ಸ್ ಸ್ಯಾಂಪಲ್ ಪೊಲೀಸರ ಪಡೆದುಕೊಂಡಿದ್ದಾರೆ. ಆತನ ವೀಡಿಯೋ ಸ್ಕ್ರಿಪ್ಟ್ ಅನ್ನು ಕೊಟ್ಟು ಮತ್ತೆ ವಾಯ್ಸ್ ಓವರ್ ಕೊಡಲು ಪೊಲೀಸರು ಹೇಳಿದ್ದಾರಂತೆ. ಅದನ್ನು ಓದಿಸಿ ವಾಯ್ಸ್ ರೆಕಾರ್ಡ್ ಮಾಡಿಕೊಂಡಿದ್ದಾರಂತೆ. ಸಮೀರ್ ವಾಯ್ಸ್ ಅನ್ನು ಪೊಲೀಸರು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ. ಪೊಲೀಸರು ಸತತ ಐದು ಗಂಟೆಗಳ ಕಾಲ ಒಟ್ಟು ಮೂರು ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.