ಮೈಸೂರು : ಧರ್ಮಸ್ಥಳದ ಪರವಾಗಿ ಮೈಸೂರಿನ ವಕೀಲರು ಧ್ವನಿ ಎತ್ತಿದ್ದಾರೆ. ಈ ಹಿನ್ನಲೆ ಇಂದು 150 ವಕೀಲರಿಂದ ಧರ್ಮಸ್ಥಳ ಯಾತ್ರೆ ಕೈಗೊಂಡಿದ್ದಾರೆ.
ಮೈಸೂರು ನ್ಯಾಯಾಲಯದ ಮುಂಭಾಗದಿಂದ ಯಾತ್ರಗೆ ಚಾಲನೆ ನೀಡಿದ್ದು, ಎರಡು ಬಸ್ ಹಾಗೂ ಹಲವು ಕಾರುಗಳ ಮೂಲಕ ಪ್ರಯಾಣ ಪ್ರಾರಂಭಿಸಿದ್ದಾರೆ.
ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆದು, ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರನ್ನುಭೇಟಿ ಮಾಡಿ, ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುವ ಭರವಸೆ ನೀಡಲಿದ್ದಾರೆ.