ಚಾಲೆಂಜಿಂಗ್‌ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಡೆವಿಲ್. ಈಗಾಗಲೇ ಡೆವಿಲ್ ಶೂಟಿಂಗ್ ಮುಕ್ತಾಯದ ಹಂತ ತಲುಪಿದ್ದು, ಈ ಸಿನಿಮಾದ ಕೆಲವೊಂದು ಡ್ಯಾನ್ಸ್ ಫೈಟಿಂಗ್ ಸೀಕ್ವೆನ್ಸ್ ಗಳು ಮಾತ್ರ ಬಾಕಿ ಉಳಿದಿವೆ ಎನ್ನಲಾಗುತ್ತಿದೆ. ಇದೇ ಟೈಮ್ ನಲ್ಲಿ ಡೆವಿಲ್ ಸಿನಿಮಾದ ಮೇಕಿಂಗ್ ವಿಡಿಯೋವೊಂದನ್ನ ಚಿತ್ರತಂಡ ಬಿಡುಗಡೆ ಮಾಡಿದೆ.
ಉದಯಪುರದಲ್ಲಿ ಚಿತ್ರೀಕರಿಸಿದ ಸಾಹಸ ಸನ್ನಿವೇಶ ಸೇರಿದಂತೆ ಕೆಲ ದೃಶ್ಯಗಳನ್ನು ರಿವೀಲ್ ಮಾಡಿದೆ. ರಾಜಸ್ತಾನದ ಉದಯಪುರದಲ್ಲಿ ಚಿತ್ರೀಕರಣದ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡಾ ಭಾಗಿಯಾಗಿದ್ದರು. ಈ ದೃಶ್ಯಗಳನ್ನು ಡೆವಿಲ್ ಚಿತ್ರತಂಡ ರಿವೀಲ್ ಮಾಡಿದ್ದು, ವಿಡಿಯೋ ನೋಡಿ ದರ್ಶನ್ ಫ್ಯಾನ್ಸ್ ಫುಲ್ ಕುಣಿದಾಡಿದ್ದಾರೆ. ಇನ್ನು ಡೆವಿಲ್ ಟೀಂ ದುಬೈ ಹಾಗೂ ಯುರೋಪ್‌ನ ಕೆಲವು ಭಾಗದಲ್ಲಿ ಶೂಟಿಂಗ್ ನಡೆಸುವ ಪ್ಲ್ಯಾನ್ ಮಾಡಿಕೊಂಡಿದೆ.