ಬೆಂಗಳೂರು: ಬರೋಬ್ಬರಿ 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್‌ಆಗಿ ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್ ಹಾಗೂ ಇಬ್ಬರು ಸಿಬ್ಬಂದಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿಎಲ್ 7 ಲೈಸೆನ್ಸ್ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಕ್ಸೈಸ್ ಡೆಪ್ಯುಟಿ ಕಮೀಷನರ್ ಜಗದೀಶ್ ನಾಯಕ್, ಎಕ್ಸೈಸ್ ಸೂಪರಿಂಟೆಂಡೆಂಟ್ ತಮ್ಮಣ್ಣ ಹಾಗೂ ಕಾನ್ಸ್ ಟೇಬಲ್ ಲಕ್ಕಪ್ಪ ಗಣಿ ಲೋಕಾ ಬಲೆಗೆ ಬಿದ್ದ ಅಧಿಕಾರಿಗಳು.

ಲೋಕಾ ಬಲೆಗೆ ಬಿದ್ದ ಮೂವರು ಲಕ್ಷ್ಮಿ ನಾರಾಯಣ ಎಂಬಾತನ ಬಳಿ ಸಿಎಲ್ 7 ಲೈಸೆನ್ಸ್ ಗೆ 75 ಲಕ್ಷ, ಮೈಕ್ರೋ ಬ್ರೇವರಿ ಲೈಸೆನ್ಸ್ ಗೆ 1,5 ಕೋಟಿ ರೂ. ಒಟ್ಟು 2 ಕೋಟಿ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 2 ಕೋಟಿ 25 ಲಕ್ಷಕ್ಕೆ ಎರಡು ಲೈಸೆನ್ಸ್ ಕೊಡುವುದಕ್ಕೆ ತಿರ್ಮಾನ ಮಾಡಲಾಗಿತ್ತು. ಅದರಂತೆ ಇಂದು 25 ಲಕ್ಷ ಹಣ ಸ್ವೀಕಾರ ಮಾಡುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದಿಸಿದ್ದಾರೆ.

ಈ ವೇಳೆ ಸೂಪರ್ ಡೆಂಟ್ ತಮ್ಮಣ್ಣ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಪೊಲೀಸರು ವೈಯಾಲಿಕಾವಲ್ ಬಳಿ ವಶಕ್ಕೆ ಪಡೆದು ಕರೆತಂದಿದ್ದಾರೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಭವನದಲ್ಲಿ ಮೂವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ; ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ವಿರಾಟ್ ಕೊಹ್ಲಿ, ಕುಲದೀಪ್ ಯಾದವ್



















