ವಿಶಾಖಪಟ್ಟಣ: ಸ್ಫೋಟಕ ದಾಂಡಿಗರಿರುವ ತಂಡವನ್ನು ದೆಹಲಿ ತಂಡ ಬಗ್ಗು ಬಡಿದಿದೆ.
ಉತ್ತಮ ಫೀಲ್ಡಿಂಗ್, ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 18.4 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ 16 ಓವರ್‌ಗಳಲ್ಲಿ 166 ರನ್ ಗಳಿಸಿ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿತು. ಡೆಲ್ಲಿ ಪರ ಕುಲದೀಪ್ ಯಾದವ್ 3 ವಿಕೆಟ್, ಮೋಹಿತ್ ಶರ್ಮಾ 1 ವಿಕೆಟ್ ಕಿತ್ತರು.
ಡೆಲ್ಲಿ ತಂಡದ ಪರ ಫಾಫ್ ಡುಪ್ಲೆಸಿಸ್ ಆರಂಭದಲ್ಲೇ ಅಬ್ಬರಿಸಿದರು. ಡುಪ್ಲೆಸಿಸ್ ಮತ್ತು ಮೆಕ್‌ಗುರ್ಕ್ ಮೊದಲ ವಿಕೆಟಿಗೆ 55 ಎಸೆತಗಳಲ್ಲಿ 81 ರನ್ ಜೊತೆಯಾಟ ನೀಡಿ, ಗೆಲುವಿಗೆ ನಾಂದಿ ಹಾಡಿದರು. ಡುಪ್ಲೆಸಿಸ್ 50 ರನ್ (27 ಎಸೆತ, 3 ಬೌಂಡರಿ, 3 ಸಿಕ್ಸ್ ) ಗಳಿಸಿದರೆ, ಮೆಕ್‌ಗುರ್ಕ್ 38 ರನ್(32 ಎಸೆತ, 4 ಬೌಂಡರಿ, 2 ಸಿಕ್ಸ್ ) ಹೊಡೆದು ಔಟಾದರು. ನಂತರ ಬಂದ ನಾಯಕ ಕೆಎಲ್ ರಾಹುಲ್ 15 ರನ್ (5 ಎಸೆತ, 2 ಬೌಂಡರಿ, 1 ಸಿಕ್ಸ್) ಗಳಿಸಿದರು.
ಡೆಲ್ಲಿ ಉತ್ತಮ ಫಿಲ್ಡಿಂಗ್ ಮಾಡಿ, ಹೈದರಾಬಾದ್ ತಂಡಕ್ಕೆ ಸೋಲಿನ ರುಚಿ ತೋರಿಸಿತು. ಹೀಗಾಗಿ ಸ್ಫೋಟಕ ದಾಂಡಿಗರು ಒಬ್ಬಬ್ಬರಾಗಿಯೇ ಪೆವಿಲಿಯನ್ ಸೇರಿದರು. ಅಭಿಶೇಕ್ ಶರ್ಮಾ 1 ರನ್‌ಗಳಿಸಿ ರನೌಟ್ ಆದರೆ, ಇಶನ್ ಕಿಶನ್ ಸಿಕ್ಸ್ ಸಿಡಿಸಲು ಹೋಗಿ ಸ್ಟಬ್ಸ್ ಹಿಡಿದ ಕ್ಯಾಚ್‌ಗೆ ಔಟಾದರು. ಜೇಕ್ ಫ್ರೇಸರ್-ಮೆಕ್‌ಗುರ್ಕ್ ಉತ್ತಮ ಕ್ಯಾಚ್ ಗೆ 74 ರನ್(41 ಎಸೆತ, 5 ಬೌಂಡರಿ, 6 ಸಿಕ್ಸ್) ಸಿಡಿಸಿ ಅಂಕಿತ್ ವರ್ಮಾ ಅವರನ್ನು ಔಟ್ ಮಾಡಿ, ತಂಡದ ಸ್ಕೋರ್ ಏರದಂತೆ ನೋಡಿಕೊಂಡರು. ಅಕ್ಷರ್ ಪಟೇಲ್ ಅವರು ನಿತೀಶ್ ಕುಮಾರ್ ರೆಡ್ಡಿ ಮತ್ತು ಡುಪ್ಲೆಸಿಸ್ ಅವರು ಮಲ್ಡರ್ ಅವರ ಕ್ಯಾಚನ್ನು ಡೈವ್ ಮಾಡಿದ ಹಿಡಿದ ಕಾರಣ ಹೈದರಾಬಾದ್ ಅಂತಿಮವಾಗಿ 163 ರನ್ ಆಲೌಟ್ ಆಗಿ ಸೋಲು ಕಂಡಿತು.