ನವದೆಹಲಿ : ಐತಿಹಾಸಿಕ ಕೆಂಪು ಕೋಟೆಯ ಬಳಿ 12 ಜನರನ್ನು ಬಲಿ ಪಡೆದ ಕಾರು ಸ್ಫೊಟ ಪ್ರಕರಣದಿಂದ ದೇಶವೇ ಬೆಚ್ಚಿಬಿದ್ದಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಶಂಕಿತ ಉಗ್ರ ವೈದ್ಯ ಉಮರ್‌ನ ತಾಯಿ ಹಾಗೂ ಆತನ ಇಬ್ಬರು ಸಹೋದರರು ಸೇರ 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿಯ ಸ್ಫೋಟ ಪ್ರಕರಣದಲ್ಲಿ ಉಮರ್ ಆತ್ಮಾ*ತಿ ಬಾಂಬರ್ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಉಮರ್ ಮನೆಯ ಸದಸ್ಯರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಹೆಚ್ಚಿನ ತನಿಖೆಗಾಗಿ ಡಿಎನ್ಎ ಪರೀಕ್ಷೆಗೂ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಡಾ. ಉಮರ್‌ನ ಇಬ್ಬರು ಸಹೋದರರಾದ ಆಶಿಕ್ ಅಹ್ಮದ್, ಜಹೂರ್ ಅಹ್ಮದ್ ಮತ್ತು ಅವನ ತಾಯಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಮಾಹಿತಿಗಳ ಪ್ರಕಾರ ಉಮರ್‌ನ ಹಿರಿಯ ಸಹೋದರ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದ. ಇನ್ನು ಕಿರಿಯ ಸಹೋದರ ಸ್ಟೆನೋಗ್ರಫಿ ಕಲಿಯುತ್ತಿದ್ದಾನೆ ಎನ್ನಲಾಗಿದೆ.
ಹಾಗೆಯೇ ಸ್ಫೋಟಗೊಂಡ ಐ20 ಕಾರಿನಲ್ಲಿ ಡಾ.ಉಮರ್ ಮೊಹಮ್ಮದ್ ನಬಿ ಮಾತ್ರ ಇದ್ದ ಅನ್ನೋದು ದೃಢವಾಗಿದೆ. ರಸ್ತೆಯ ಸಿಸಿಟಿವಿಯಲ್ಲಿ ಒಬ್ಬನೇ ಕಾರ್ ಡ್ರೈವ್ ಮಾಡುತ್ತಿದ್ದಿದ್ದು ಕಾಣಿಸಿದೆ. ಪುಲ್ವಾಮಾ ಜಿಲ್ಲೆಯ ವೈದ್ಯರ ತಂಡವೇ ಈಗ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿತ್ತಾ ಎಂಬ ಅನುಮಾನ ಶುರುವಾಗಿದೆ. ದೆಹಲಿಯ ಪೋಲಿಸರು ಘಟನಾ ಸ್ಥಳದಲ್ಲಿ ಸಿಕ್ಕ ದೇಹದ ಭಾಗಗಳನ್ನ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ : ಚಿನ್ನ ಮಾರಾಟ ಮಾಡಿ ಹಣ ಕೊಡೋದಾಗಿ ವಂಚನೆ | ಇಬ್ಬರು ಆರೋಪಿಗಳ ಬಂಧನ!


















