ಬೆಂಗಳೂರು : ಬೆಂಗಳೂರಿನಲ್ಲಿ ʼನಮ್ಮ ಮೆಟ್ರೋʼ ಸೇವೆ ಜನರ ಪ್ರಮುಖ ಸಾರಿಗೆ ಸಂಪರ್ಕವಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಟ್ರಾಫಿಕ್‌ನಿಂದ ಮೆಟ್ರೋ ಪ್ರಯಾಣ ಸುಗಮ ಹಾಗೂ ತಕ್ಕ ಸಮಯಕ್ಕೆ ತಲುಪಲು ಸಾಧ್ಯವಿದೆ. ಇತ್ತೀಚೆಗಷ್ಟೇ ಹಳದಿ ಮೆಟ್ರೋ ಕೂಡ ಸೇರ್ಪಡೆಯಾಗಿದ್ದು, ಇದರಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಒಂದಷ್ಟು ಪರಿಹಾರ ಸಿಕ್ಕಂತಾಗಿದೆ.
ಆದರೆ, ಮತ್ತೊಂದೆಡೆ ಮೆಟ್ರೋ ಪ್ರಯಾಣ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಈ ದರ ಏರಿಕೆಯಿಂದ ಪ್ರಯಾಣಿಕರಿಗೆ ದೊಡ್ಡ ಹೊಡೆತ ಬಿದ್ದಿದೆ. ಟಿಕೆಟ್ ದರ ಏರಿಕೆ ವಿರುದ್ದ ನಿರಂತರವಾಗಿ ಆಕ್ರೋಶ ಹೊರ ಹಾಕುತ್ತಾ ಬಂದಿದ್ದು, ಇದೀಗ ಮೆಟ್ರೋ ಟಿಕೆಟ್ ದರ ಏರಿಕೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿವಿಧ ವಿಮರ್ಶೆಗಳು ಹುಟ್ಟಿಕೊಂಡಿವೆ.