ಪ್ರಭಾಸ್ ಜೊತೆ ಮತ್ತೊಮ್ಮೆ ಬೆಳ್ಳಿತೆರೆ ಹಂಚಿಕೊಳ್ಳಲು ಕನ್ನಡತಿ ದೀಪಿಕಾ ಪಡುಕೋಣೆ ಸಜ್ಜಾಗಿದ್ದಾರೆ.
ಸಿನಿ ಪ್ರಿಯರ ಬಹುನಿರೀಕ್ಷಿತ ಸ್ಪಿರಿಟ್ ಸಿನಿಮಾದಲ್ಲಿ ದೀಪಿಕಾ ನಟಿಸುವುದು ಇದೀಗ ಪಕ್ಕಾ ಆಗಿದೆ. ಅನಿಮಲ್ ಚಿತ್ರ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ನಲ್ಲಿ ಮತ್ತೊಮ್ಮೆ ಕಲ್ಕಿ ಜೋಡಿ ಜೊತೆಯಾಗುತ್ತಿದೆ.
ಹಾಗೆ ನೋಡಿದರೆ, ಸ್ಪಿರಿಟ್ ನಲ್ಲಿ ಪ್ರಭಾಸ್ ಗೆ ಜೊತೆಯಾಗುವವರು ಯಾರು ಎನ್ನುವ ಚರ್ಚೆ ಬಹು ದಿನಗಳಿಂದ ನಡೆದಿತ್ತು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈ ಹೊತ್ತಿಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ, ಕೆಲ ತಾಂತ್ರಿಕ ತೊಡಕುಗಳಿಂದ ಸಿನಿಮಾ ಮುಂದೂಡುತ್ತಾ ಬರಲಾಗುತಿತ್ತು.
ಆದರೆ, ನಿರ್ದೇಶಕ ಸಂದೀಪ್ ಸಿನಿಮಾದ ಕತೆ ರೆಡಿಯಾದಾಗಲೇ ದೀಪಿಕಾ ಅವರನ್ನು ನಾಯಕಿಯಾಗುವಂತೆ ಮನವಿ ಮಾಡಿದರು. ಆದರೆ, ಆಗ ಆಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ದೀಪಿಕಾ ಆಫರ್ ರಿಜೆಕ್ಟ್ ಮಾಡಿದ್ದರು. ಆದರೆ, ಈಗ ಅನಿರೀಕ್ಷಿತವಾಗಿ ಚಿತ್ರ ತಡವಾಗಿದ್ದು, ಮತ್ತೊಮ್ಮೆ ದೀಪಿಕಾ ಮಡಿಲಿಗೇ ಆಫರ್ ಜಾರಿದೆ.
ಅಕ್ಟೋಬರ್ ನಿಂದ ಅಧಿಕೃತವಾಗಿ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಿದೆ. ಪ್ರಭಾಸ್ ಮತ್ತು ದೀಪಿಕಾ ನಟನೆಯ ಎರಡನೇ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿದೆ.