ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ. ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿರುವ ಮೋದಿ ಮಹತ್ತರ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.
ಇದರ ಮಧ್ಯೆ ಮೇ 9ರಂದು ರಷ್ಯಾ ಪ್ರವಾಸಕ್ಕೆ ತೆರಳಬೇಕಿದ್ದ ಪ್ರಧಾನಿ ಮೋದಿ ಇದೀಗ ಆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ರಷ್ಯಾದ ವಿಕ್ಟರಿ ಪರೇಡ್ ನಲ್ಲಿ ಭಾಗಿಯಾಗಬೇಕಿದ್ದ ಮೋದಿ ಇದೀಗ ತಮ್ಮ ಪ್ರವಾಸವನ್ನೇ ರದ್ದುಗೊಳಿಸಿದ್ದಾರೆ.
ಪ್ರಧಾನಿ ಈ ನಡೆ, ಯಾವ ಸಂದರ್ಭದಲ್ಲಾದರೂ ಸಮರ ಆರಂಭವಾಗಬಹುದು ಎನ್ನುವ ಅನುಮಾನ ಮೂಡಿಸಿದೆ. ಈಗಾಗಲೇ ಸೇನೆಗೆ ಫ್ರೀ ಹ್ಯಾಂಡ್ ನೀಡಿರುವ ಪ್ರಧಾನಿ, ಐದು ವರ್ಷಗಳ ಬಳಿಕ ಹೈವೋಲ್ಟೇಜ್ ಕ್ಯಾಬಿನೇಟ್ ಸಭೆ ಕರೆದಿದ್ದಾರೆ.