ಅಹಮದಾಬಾದ್ ನಲ್ಲಿ ಸಂಭವಿಸಿದ ಘೋರ ವಿಮಾನ ದುರಂತದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು ಇಹಲೋಕ ತ್ಯಜಿಸಿದ್ದಾರೆ. 29 ವರ್ಷದ ಸೊಸೆ ಹರ್ ಪ್ರೀತ್ ಹೊರಾ ಇಹಲೋಕ ತ್ಯಜಿಸಿದ್ದಾರೆ. ಪರಿಣಾಮ ಇಂಧೋರ್ ನ ರಾಜ್ ಮೊಹಲ್ಲಾದಲ್ಲಿ ನೆಲೆಸಿರುವ ಸಿಖ್ ಕುಟುಂಬ, ದು:ಖದ ಮಡುವಿನಲ್ಲಿ ಮುಳುಗಿದೆ.
ಜೂನ್ 16 ರಂದು ಲಂಡನ್ ನಲ್ಲಿ ಕೆಲಸ ಮಾಡುತ್ತಿರುವ ಆಕೆಯ ಪತಿ ರಾಬಿ ಸಿಂಗ್ ಹೊರಾ ಅವರ ಹುಟ್ಟುಹಬ್ಬ ಇತ್ತು. ಅದಕ್ಕೆ ಜೂನ್ 19 ರ ಬದಲಿಗೆ ಜೂನ್ 12 ರಂದೇ ತೆರಳುವ ಮೂಲಕ ತನ್ನ ಪತಿಗೆ ಅಚ್ಚರಿ ನೀಡಲು ಬಯಸಿದ್ದ ಹರ್ ಪ್ರೀತ್ ವಿಮಾನ ದುರಂತದಲ್ಲಿ ಸುಟ್ಟು ಕರಕಲಾಗಿದ್ದಾರೆ. ಅಹಮದಾಬಾದ್ ಮೂಲದ ಹರ್ಪ್ರೀತ್ ಅವರು 2020 ರಲ್ಲಿ ರಾಬಿಯನ್ನು ವಿವಾಹವಾಗಿದ್ದರು. ರಾಬಿ ಅವರು ಎರಡ್ಮೂರು ವರ್ಷಗಳಿಂದ ಲಂಡನ್ ನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.