ಬೆಂಗಳೂರು : ಕ್ರಿಕೆಟ್ ಬಗ್ಗೆ ತಿಳಿದಿರುವ ಪ್ರತಿಯೊಬ್ಬರಿಗೂ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಚಿರಪರಿಚಿತ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾಗ ಅವರು ತೆಲುಗು ಹಾಡುಗಳಿಗೆ ಡಾನ್ಸ್ ಮಾಡುತ್ತಾ ಹಾಡು ಹಾಡುತ್ತಾ ಗಮನ ಸೆಳೆದಿದ್ದರು. ಅದಾದ ಬಳಿಕ ಅವರು ರಾಜಮೌಳಿ ಜೊತೆಗೆ ಜಾಹೀರಾತಿನಲ್ಲೂ ನಟಿಸಿದ್ದರು.
Former 🚨Australian ace opening batsman #DavidWarner who during his IPL stint had played for SRH became an admirer of #Tollywood . Now he is debuting as actor in a Telugu film #Robinhood releasing on March 28!@davidwarner31 pic.twitter.com/AKFPDAMcDc
— Sreedhar Pillai (@sri50) March 4, 2025
ಹೈದರಾಬಾದ್ ತನ್ನ ಎರಡನೇ ತವರು ಎಂದು ವಾರ್ನರ್ ಹಲವು ಸಲ ಹೇಳಿದ್ದರು. ಈ ಕಾರಣಕ್ಕೆ ತೆಲುಗು ಚಿತ್ರಗಳಲ್ಲಿ ನಟಿಸುವಂತೆ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಕೋರಿದ್ದರು. ಇದೀಗ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಸದ್ದಿಲ್ಲದೆ ಟಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಪುಷ್ಪ-2 ಸೇರಿ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ನಿರ್ಮಿಸಿದ ‘ರಾಬಿನ್ ಹುಡ್’ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: IND vs AUS: ರಾಹುಲ್ ದ್ರಾವಿಡ್‌ರ ದೀರ್ಘಾವಧಿ ಕ್ಯಾಚ್‌ಗಳ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಸಿನಿಮಾ ಈಗ ಬಿಡುಗಡೆಗೂ ಸಜ್ಜಾಗಿದ್ದು, ವಾರ್ನರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ನಿರ್ಮಾಪಕ ರವಿಶಂಕರ್ ಅವರು ತಮ್ಮ ಚಿತ್ರದ ಪ್ರಮೋಷನ್ ಒಂದರಲ್ಲಿ ಡೇವಿಡ್ ವಾರ್ನರ್ ನಟಿಸಿರುವ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಆ ಚಿತ್ರ ಬೇರೆ ಯಾವುದೂ ಅಲ್ಲ, ನಟರಾದ ನಿತಿನ್, ಶ್ರೀಲೀಲಾ ನಟಿಸಿರುವ ‘ರಾಬಿನ್ ಹುಡ್’ ಚಿತ್ರದಲ್ಲಿ ಡೇವಿಡ್ ವಾರ್ನರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ!
ಇದನ್ನೂ ಓದಿ: Maha Kumbh 2025: ಕುಂಭಮೇಳದಿಂದ 3.5 ಲಕ್ಷ ಕೋಟಿ ರೂ. ಆದಾಯ ಹೇಗೆ? ಯೋಗಿ ಕೊಟ್ಟ ಲೆಕ್ಕ ಇಲ್ಲಿದೆ
ಮಾರ್ಚ್ 28ಕ್ಕೆ ರಿಲೀಸ್
ರಾಬಿನ್ಹುಡ್ ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದು ಸದ್ಯದ ಕುತೂಹಲ. ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಡೇವಿಡ್ ವಾರ್ನರ್ ಅವರ ವ್ಯಕ್ತಿತ್ವ ವಿಭಿನ್ನವಾಗಿದೆ. ತೆಲುಗು ಪ್ರೇಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ವಾರ್ನರ್ ನಟನೆ ಎಲ್ಲರಿಗೂ ಇಷ್ಟವಾಗುವ ಸಾಧ್ಯತೆ ಇದೆ. ‘ ಮಾರ್ಚ್ 28ರಂದು ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ.
ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಡೇವಿಡ್ ವಾರ್ನರ್ ಭಾಗದ ದೃಶ್ಯಗಳನ್ನು ಗುಟ್ಟಾಗಿ ಚಿತ್ರೀಕರಿಸಲಾಗಿದೆ. ವಾರ್ನರ್ ನಟಿಸುತ್ತಾರೆ ಎಂಬುದನ್ನಷ್ಟೇ ಹೇಳಿರುವ ನಿರ್ಮಾಪಕರು, ಅವರ ಪಾತ್ರವೇನು ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.
ಬಹುನಿರೀಕ್ಷಿತ ಈ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶಿಸುತ್ತಿದ್ದಾರೆ. ವಾರ್ನರ್ ನಟಿಸಿದ್ದಾರೆ ಎನ್ನಲಾದ ಫೋಟೋವೊಂದು ವೈರಲ್ ಆಗುತ್ತಿದ್ದು, ಗನ್ ಹಿಡಿದು ಮಾಸ್ ಅವತಾರ ತೋರಿದ್ದಾರೆ.
ಐಪಿಎಲ್ನಲ್ಲಿ ಅನ್ಸೋಲ್ಡ್
2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ವಾರ್ನರ್, 2024ರಲ್ಲಿ ಎಲ್ಲಾ ಮಾದರಿಗೆ ವಿದಾಯ ಘೋಷಿಸಿದರು. 112 ಟೆಸ್ಟ್ ಪಂದ್ಯಗಳಲ್ಲಿ 8786 ರನ್, 161 ಏಕದಿನ ಪಂದ್ಯಗಳಲ್ಲಿ 6932 ರನ್, 110 ಟಿ20ಐ ಪಂದ್ಯಗಳಲ್ಲಿ 3277 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲೂ 184 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 6565 ರನ್ ಗಳಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 49 ಶತಕ ಸಿಡಿಸಿದ್ದಾರೆ. ಕಳೆದ ವರ್ಷ ಕ್ರಿಕೆಟ್ಗೆ ಗುಬೈ ಹೇಳಿದ ವಾರ್ನರ್, ಐಪಿಎಲ್ನಲ್ಲೂ ಅನ್ಸೋಲ್ಡ್ ಆಗಿದ್ದಾರೆ. ಅವರು ಮೂಲ ಬೆಲೆ ರೂ. 2 ಕೋಟಿ ಇತ್ತು.