ದಾವಣಗೆರೆ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ವಿರೋಧಿಸಿ, ʼದಾವಣಗೆರೆ ಜನರ ನಡಿಗೆ ಧರ್ಮಸ್ಥಳದ ಕಡೆಗೆ” ಎಂಬ ಘೋಷದೊಂದಿಗೆ ದಾವಣಗೆರೆಯಲ್ಲಿ ನೂರಾರು ಭಕ್ತರು ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದಾರೆ.
ಜಿಲ್ಲೆಯ ವಿವಿಧೆಡೆಯಿಂದ 50 ಕಾರು, 2 ಬಸ್‍ನಲ್ಲಿ ಭಕ್ತರು ಹೊರಟಿದ್ದಾರೆ. ಉಜಿರೆಯಲ್ಲಿ ಎಲ್ಲರೂ ಸೇರಿ, ಅಲ್ಲಿಂದ ಮೆರವಣಿಗೆ ನಡೆಸಲಿದ್ದಾರೆ. ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಲಿದ್ದಾರೆ.
ಬಳಿಕ ನಿಮ್ಮ ಜೊತೆ ನಾವಿದ್ದೇವೆ ಎಂದು ಹೆಗ್ಗಡೆಯವರಿಗೆ ಭಕ್ತರು ವಾಗ್ದಾನ ನೀಡಲಿದ್ದಾರೆ. ನಗರದ ಜಯದೇವ ವೃತ್ತದಿಂದ ಯಾತ್ರೆಗೆ ಚಾಲನೆ ಸಿಕ್ಕಿದೆ.