ಬೆಂಗಳೂರು: ಪ್ರೆಸ್ಟೀಜ್ ಗಾಲ್ಫ್ ಷೈರ್ ಕ್ಲಬ್ ವತಿಯಿಂದ ಪ್ರೆಸ್ಟೀಜ್ ಮಾಸ್ಟರ್ಸ್ ಸೀರೀಸ್ 10ನೇ ವಾರ್ಷಿಕೋತ್ಸವದ ಅಂಗವಾಗಿ ಕ್ಲಬ್ ಗಾಲ್ಫರ್ಸ್ ಗಾಗಿ ನಡೆದ ಓಪನ್ ಸ್ಪರ್ಧೆಯಲ್ಲಿ ಅನುಪಮಾ ವಾಟಾಳ್ ವಿಜೇತರಾಗಿದ್ದಾರೆ.

ಅನುಪಮಾ ವಾಟಾಳ್ ಅವರು ಮಾಜಿ ಶಾಸಕ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಪುತ್ರಿ. ಗಾಲ್ಫ್ ಸ್ಪರ್ಧೆಯಲ್ಲಿ ಅನುಪಮಾ 37 ಅಂಕ ಗಳಿಸುವುದರ ಮೂಲಕ ವಿಜೇತರಾಗಿದ್ದಾರೆ. ಇನ್ನುಳಿದಂತೆ ಜಿಬಿನ್ ಜಾನ್ 36, ಸನ್ ಯಾಂಜಿ 35 ಅಂಕ ಗಳಿಸಿದರು. ಭಾರತದ ವಿವಿಧೆಡೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಆದರೆ, ಅತ್ಯುತ್ತಮ ಪ್ರದರ್ಶನ ನೀಡಿದ ಅನುಪಮಾ ವಾಟಾಳ್ ಅವರು ಗೆದ್ದು ಬೀಗಿದರು.