ಮುಂಬಯಿ: ನಟಿ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈಗ ಡೇಟ್ ಫಿಕ್ಸ್ ಆಗಿದೆ.
ಚಿತ್ರದ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದರೂ ಹಲವಾರು ಕಾರಣಗಳಿಂದಾಗಿ ಚಿತ್ರ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಲೇ ಇತ್ತು. ಆದರೆ, ಈಗ ಮುಂದೂಡಿಕೆಗೆ ಕಂಗನಾ ಬ್ರೇಕ್ ಹಾಕಿದ್ದು, ಬಿಡುಗಡೆಯ ದಿನಾಂಕ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡಿರುವ ನಟಿ ಕಂಗನಾ ಅಭಿಮಾನಿಗಳಿಗೆ ಡೇಟ್ ತಿಳಿಸಿದ್ದಾರೆ. ದೇಶದ ಅತ್ಯಂತ ಶಕ್ತಿಶಾಲಿ ಮಹಿಳೆಯ ಮಹಾಕಾವ್ಯ ಮತ್ತು ಭಾರತದ ಹಣೆಬರಹವನ್ನು ಬದಲಾಯಿಸಿದ ಕ್ಷಣ. ಎಮೆರ್ಜೆನ್ಸಿ ಮುಂದಿನ ವರ್ಷ ಜ. 17ರಂದು ತೆರೆಗೆ ಬರಲಿದೆ ಎಂದು ಹೇಳಿದ್ದಾರೆ.
ಈ ಚಿತ್ರ ಜೂನ್ ತಿಂಗಳಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಿನಾಂಕ ಮುಂದೂಡಲಾಗಿತ್ತು. ಈಗ ಚಿತ್ರ ಬಿಡುಗಡೆಗೆ ಮುಂದಿನ ವರ್ಷ ದಿನಾಂಕ ನಿಗದಿ ಪಡಿಸಲಾಗಿದೆ. ಈ ಚಿತ್ರದಲ್ಲಿ ಕಂಗನಾ ರಣಾವತ್ ಅವರೊಂದಿಗೆ ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ ಮತ್ತು ಶ್ರೇಯಸ್ ತಲ್ಪಾಡೆ ಸೇರಿದಂತೆ ಹಲವರು ನಟಿಸಿದ್ದಾರೆ.