ನಟ ದರ್ಶನ್ ಜೈಲಿನಿಂದಲೇ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಈ ಸಂದೇಶವನ್ನು ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿದ್ದಾರೆ.

ನನ್ನ ಕಷ್ಟ ಸುಃಖದಲ್ಲಿ ಭಾಗಿಯಾಗಿರೋ ಪ್ರತಿಯೊಬ್ಬ ಅಭಿಮಾನಿಗೂ ಸಾಷ್ಟಾಂಗ ನಮಸ್ಕಾರ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಜೀವನ ಪರ್ಯಂತ ಅಭಾರಿ. ಪ್ರಸಕ್ತ ವಿದ್ಯಮಾನ ಏನೇ ಇದ್ದರೂ ನನ್ನ ನಂಬಿ ಕನಸು ಕಂಡಿರೋ ಡೆವಿಲ್ ತಂಡಕ್ಕೆ ನಿಮ್ಮ ಸಹಾಕಾರ ಇರಲಿ. ಡೆವಿಲ್ ಕೆಲಸ ಯಾವುದೇ ಅಡೆತಡೆ ಇಲ್ಲದೆ ಸಾಗಲಿ. ನಿಮ್ಮೆಲ್ಲರ ಸಹಕಾರ ಡೆವಿಲ್ ತಂಡಕ್ಕೆ ಇರುತ್ತೆ ಅಂತ ನಂಬಿದ್ದೇನೆ. ಸಿನಿಮಾ ಒಂದು ಮನರಂಜನಾ ಮಾಧ್ಯಮ.

ಅದನ್ನ ಮನರಂಜನೆ ದೃಷ್ಟಿಯಲ್ಲಿ ಮಾತ್ರ ನೋಡಿ ಅಂತ ದರ್ಶನ್ ತಮ್ಮ ಅಭಿಮಾನಿಗಳಿಗೆ ಸಂದೇಶ ಸಾರಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


















