ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇಂದು ನಟಿ ರಚಿತಾ ರಾಮ್ (Rachita Ram) ಜೈಲಿಗೆ ತೆರಳಿ ದರ್ಶನ್ ರನ್ನು ಭೇಟಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜನನ್ನು ರಾಜನ ರೀತಿಯಲ್ಲಿ ನೋಡಬೇಕು. ಹೀಗೆ ನೋಡುವುದು ಕಷ್ಟ ಆಗುತ್ತದೆ. ದರ್ಶನ್ ಸರ್ ನೋಡಿ ಕಣ್ಣೀರು ಸುರಿಸಿದೆ. ಅವರೇ ನನಗೆ ಸಾಂತ್ವಾನ ಹೇಳಿದ್ದಾರೆ. ಅವರ ಬ್ಯಾನರ್ ನಿಂದ ನಾನು ಇಂಡಸ್ಟ್ರಿಗೆ ಬಂದಿದ್ದೇನೆ. ಅವರು ಇಲ್ಲದಿದ್ದರೆ ನಾನು ಬಿಂದ್ಯಾ ರಾಮ್ ಆಗಿಯೇ ಇರುತ್ತಿದ್ದೆ. ರಚಿತಾ ರಾಮ್ ಆಗುತ್ತಿರಲಿಲ್ಲ. ನಮ್ಮ ಕುಟುಂಬದ ಮೇಲೆ ಅವರ ಋಣ ಹೆಚ್ಚಿದೆ. ಸಿನಿಮಾರಂಗಕ್ಕೆ ನನ್ನನ್ನು ಪರಿಚಯಿಸಿದ ದರ್ಶನ್ ಅವರು ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದ ಅವರು ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುವುದನ್ನು ನನಗೆ ನಂಬಲು ಆಗುತ್ತಿಲ್ಲ. ಅವರು ಆದಷ್ಟು ಬೇಗ ಮುಕ್ತರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ದರ್ಶನ್ ಸರ್ ಆರೋಗ್ಯವಾಗಿದ್ದಾರೆ. ದರ್ಶನ್ ಅವರನ್ನು ಎಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದಷ್ಟು ಬೇಗ ಹೊರಗೆ ಬನ್ನಿ ಎಂದು ಹೇಳಿದ್ದೇನೆ ಎಂದಿದ್ದಾರೆ ಈ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 17 ಜನ ಜೈಲಿನಲ್ಲಿದ್ದಾರೆ.