ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮತ್ತೆ ಅಂದರ್ ಆಗಿರೋ ನಟ ಮತ್ತು A2 ಆರೋಪಿ ದರ್ಶನ್ ಬಗ್ಗೆ ನಟಿ ರಮ್ಯಾ ಮರುಕ ಪಟ್ಟಿದ್ದಾರೆ. ದರ್ಶನ್ ಫ್ಯಾನ್ಸ್ ಹಾಗೂ ರಮ್ಯಾ ನಡುವಿನ ಸಮರದ ಮಧ್ಯೆಯೇ ಈ ರಮ್ಯಾ ನಡೆ ಆಶ್ಚರ್ಯಕ್ಕೆ ಕಾರಣವಾಗಿದೆ.

ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕೆ ಡಿ ಫ್ಯಾನ್ಸ್ ಮೇಲೆ ತಿರುಗಿ ಬಿದ್ದಿದ್ದ ರಮ್ಯಾ, ಇದೇ ಮೊದಲ ಬಾರಿಗೆ ದರ್ಶನ್ ಪರವಾಗಿ ಎಮೋಷನಲ್ ಸಪೋರ್ಟ್ ಕೊಟ್ಟಿದ್ದಾರೆ. ವೈರಲ್ ಆಡಿಯೋದಲ್ಲಿ ರಮ್ಯಾ ದರ್ಶನ್ ನಡೆದು ಬಂದ ಹಾದಿಯನ್ನ ನೆನಪಿಸಿಕೊಂಡಿದ್ದಾರೆ. ಛೆ! ಹೀಗಾಗಬಾರದಿತ್ತು ಅಂತ ಬೇಸರಿಸಿಕೊಂಡಿದ್ದಾರೆ. ರಮ್ಯಾ ದರ್ಶನ್ ಜೊತೆ ‘ದತ್ತ’ ಮತ್ತು ʻಅರಸುʼ ಸಿನಿಮಾಗಳಲ್ಲಿ ಅಭಿನಯಿಸಿದ್ರು. ಆ ಸಮಯದಲ್ಲಿ ಇಬ್ಬರಿಗೂ ಸ್ನೇಹವಾಗಿತ್ತು.

ದರ್ಶನ್ ತಾವು ಪಟ್ಟ ಕಷ್ಟಗಳ ಬಗ್ಗೆ ರಮ್ಯಾ ಬಳಿ ಹೇಳಿಕೊಂಡಿದ್ದರಂತೆ. ಲೈಟ್ ಬಾಯ್ ಆಗಿ ಬಂದು ಹೀರೊ ಆಗಿ ಬೆಳೆದ ದರ್ಶನ್ ಸಹವಾಸ ಸರಿ ಇರ್ಬೇಕಿತ್ತು ಎಂದಿದ್ದಾರೆ. ಇನ್ನೂ ಪವಿತ್ರಗೌಡ ಬಗ್ಗೆಯೂ ಮಾತನಾಡಿರೋ ರಮ್ಯಾ ‘ಆಕೆ ಒಬ್ಬ ತಾಯಿ, ಆಕೆಗೂ ಮಗಳಿದ್ದಾಳೆ. ಕೋಪವೇಶ ಬೇಕಿರಲಿಲ್ಲ. ಇಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಕ್ಕಿರೋದು ಸಮಾಧಾನ ತಂದಿದೆ’ ಅಂತ ರಮ್ಯಾ ಮಾತನಾಡಿದ್ದಾರೆ.

ಇತ್ತ ದರ್ಶನ್ ಮತ್ತೆ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗುತ್ತಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ನೊಂದಿದ್ದಾರೆ. ದರ್ಶನ್ ಕೈಕಟ್ಟಿ ನಿಂತಿರೋ ಫೋಟೋ ಹಾಕಿ, ಹಾರ್ಟ್ ಒಡೆದ ಸಿಂಬಲ್ ಮಾಡಿರೋ ವಿಜಯಲಕ್ಷ್ಮಿ, ಸದ್ಯದ ತಮ್ಮ ಮನಸ್ಸಿನ ನೋವನ್ನ ಹೊರ ಹಾಕಿದ್ದಾರೆ.

ಅಂತೂ ದರ್ಶನ್ ಗೆ ಬೇಲ್ ರದ್ದಾಗಿರೋದು ಡಿ ಬಳಗಕ್ಕೆ ಮಾತ್ರವಲ್ಲದೆ ಚಿತ್ರರಂಗದವರಿಗೂ ಆತಂಕ ಸೃಷ್ಟಿಸಿದೆ. ದರ್ಶನ್ ಮುಂದಿನ ಬೇಲ್ ಪ್ರೊಸೀಜರ್ ಗೊತ್ತಾಗುವವರೆಗೂ ನೆಮ್ಮದಿ ಕನಸಿನ ಮಾತೇ..!