ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಈಗ ಚಾರ್ಜ್ ಶೀಟ್ ಆತಂಕ ಮನೆ ಮಾಡಿದೆ ಎನ್ನಲಾಗುತ್ತಿದೆ. ಸದ್ಯ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ದರ್ಶನ್ ಟೆನ್ಶನ್ ನಲ್ಲಿದ್ದಾರೆ ಎನ್ನಲಾಗಿದೆ.
ತೀವ್ರ ಒತ್ತಡದಲ್ಲಿರುವ ನಟ ದರ್ಶನ್ ಕಳೆದ ರಾತ್ರಿ ಕೂಡ ದರ್ಶನ್ ನಿದ್ದೆ ಇಲ್ಲದೆ ಎಚ್ಚರವಾಗಿಯೇ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಜಾರ್ಜ್ ಶೀಟ್ ಟೆನ್ಷನ್‌ನಲ್ಲಿ ಊಟ, ನಿದ್ದೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಚಾರ್ಜ್ ಶೀಟ್ ಸಲ್ಲಿಸುವ ಕುರಿತು ಪೊಲೀಸರು ಹೇಳಿದ್ದರು. ಇನ್ನೇರಡು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಬಹುದು ಎನ್ನಲಾಗುತ್ತಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ದರ್ಶನ್ ಗೆ ಆತಂಕ ಶುರುವಾಗಿದೆ. ನಟ ದರ್ಶನ್ ಜಾರ್ಜ್ ಶೀಟ್ ಸಲ್ಲಿಕೆ ಬಗ್ಗೆ ಏನು ಗೊತ್ತಾಗದೆ ಅತಂತ್ರದಲ್ಲಿದ್ದಾರೆ. ಜಾರ್ಜ್ ಶೀಟ್ ನಲ್ಲಿ ಎ 2 ನಿಂದ ಎ1 ಗೆ ದರ್ಶನ್ ಹೆಸರು ಬರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಹೀಗಾಗಿ ಒಂದೊಂದು ಕ್ಷಣವನ್ನು ಅವರು ಆತಂಕದಲ್ಲಿ ಕಳೆಯುತ್ತಿದ್ದಾರೆ.