ಕೊಪ್ಪಳ: ಪುತ್ರ ಕಿರಿಟಿ ರೆಡ್ಡಿ ನಟನೆಯ ʼಜ್ಯೂನಿಯರ್ʼ ಸಿನೇಮಾ ಬಿಡುಗಡೆ ಹಿನ್ನೆಲೆ ಶಾಸಕ ಗಾಲಿ ಜನಾರ್ದನ ರೆಡ್ಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.
ಮಗ ನಟ ಕಿರಿಟಿ ರೆಡ್ಡಿ, ಪತ್ನಿ ಲಕ್ಷ್ಮಿಅರುಣಾ, ಮಗಳು ಭ್ರಹ್ಮಿಣಿ, ಅಳಿಯ ರಾಜೀವ ರೆಡ್ಡಿ ಸೇರಿ ಕುಟುಂಬಸ್ಥರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡರು. ಇದೇ ವೇಳೆ ಮೊಮ್ಮಗ ಕಾರ್ತಿಕೇಯನ ಜವಳ ಕಾರ್ಯಕ್ರಮವನ್ನು ನೆರವೇರಿಸಿದರು.