ನಟ ದರ್ಶನ್ ಕೋರ್ಟ್ ಪ್ರಕ್ರಿಯೆ ಮುಗಿಸಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಂಗೇರಿಯ ಆಸ್ಪತ್ರೆಯಿಂದ ಹೊರ ಬಂದಾಗ ಅಭಿಮಾನಿಗಳು ಡಿಸ್ಚಾರ್ಜ್ ಆಗಿದ್ದಾರೆ ಎಂದೇ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಈಗ ಅವರು ಮತ್ತೆ ಆಸ್ಪತ್ರೆಗೆ ಸೇರಿದ್ದಾರೆ.
ದರ್ಶನ್ ಇಂದು ಜಡ್ಜ್ ಮುಂದೆ ಹಾಜರಾಗಿ ಸಹಿ ಮಾಡಿದರು. ಜಾಮೀನು ಮತ್ತು ಶ್ಯೂರಿಟಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮುಗಿಸಿ ಮತ್ತೆ ಬಿಜಿಎಸ್ ಆಸ್ಪತ್ರೆಗೆ ಮರಳಿದ್ದಾರೆ. ಅವರಿಗೆ ಶಸ್ತ್ರ ಚಿಕಿತ್ಸೆ ಆಗಿಲ್ಲ. ಡಿಸೆಂಬರ್ 18 ಅಥವಾ 19ರಂದು ಅವರು ಡಿಸ್ಚಾರ್ಜ್ ಆಗಿ ಮನೆಗೆ ಮರಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸೆಷನ್ಸ್ ಕೋರ್ಟ್‌ನಲ್ಲಿ 1 ಲಕ್ಷ ರೂ. ಜಾಮೀನು ಬಾಂಡ್ ಗೆ ದರ್ಶನ್ ಸಹಿ ಮಾಡಿದ್ದಾರೆ. ಬೆನ್ನು ನೋವು ಇದ್ದ ಹಿನ್ನೆಲೆಯಲ್ಲಿ ದರ್ಶನ್ ಕುಂಟುತ್ತಲೇ ಕೋರ್ಟ್ ಪ್ರವೇಶಿಸಿದ್ದರು. ದರ್ಶನ್ ಕೋರ್ಟ್ ಗೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಪಾಸ್ ಪೋರ್ಟ್ ಹಿಂಪಡೆಯುವ ಅರ್ಜಿಗೂ ದರ್ಶನ್ ಸಹಿ ಹಾಕಿದ್ದಾರೆ. ಮಧ್ಯಂತರ ಜಾಮೀನು ವೇಳೆ ಪಾಸ್ ಪೋರ್ಟ್ ಸರಂಡರ್ ಮಾಡುವಂತೆ ಷರತ್ತು ಇತ್ತು. ರೆಗ್ಯುಲರ್ ಜಾಮೀನು ವೇಳೆ ಈ ಷರತ್ತು ಇಲ್ಲ. ಹೀಗಾಗಿ ಪಾಸ್ ಪೋರ್ಟ್ ಹಿಂತಿರುಗಿಸಲು ಕೋರ್ಟ್ ಸಮ್ಮತಿ ನೀಡಿದೆ.